ADVERTISEMENT

ಬಿಸಿಸಿಐ ಕೂಚ್‌ ಬಿಹಾರ್ ಟ್ರೋಫಿ | ಅಕ್ಷತ್‌ ಪ್ರಭಾಕರ್ ಶತಕ: ಕರ್ನಾಟಕ ಹೋರಾಟ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 20:57 IST
Last Updated 3 ಡಿಸೆಂಬರ್ 2025, 20:57 IST
   

ಬೆಂಗಳೂರು: ಅಕ್ಷತ್ ಪ್ರಭಾಕರ್ ಅವರು ಅಮೂಲ್ಯ ಶತಕದ (112, 4x11, 6x3) ಮೂಲಕ ಕರ್ನಾಟಕ ತಂಡದ ಸೋಲನ್ನು ಬಹುತೇಕ ತಪ್ಪಿಸಿದರು. ಅವರ ಆಟದಿಂದಾಗಿ ಕರ್ನಾಟಕ ತಂಡವು ಅನಂತಪುರದಲ್ಲಿ ನಡೆಯುತ್ತಿರುವ ಬಿಸಿಸಿಐ ಕೂಚ್‌ ಬಿಹಾರ್ ಟ್ರೋಫಿ ಪಂದ್ಯದ ಮೂರನೇ ದಿನ ಆತಿಥೇಯ ಆಂಧ್ರ ತಂಡಕ್ಕೆ ದಿಟ್ಟ ಹೋರಾಟ ನೀಡಿತು. 

ಆದರೆ ಸಿ ಗುಂಪಿನ ಈ ‍ಪಂದ್ಯದಲ್ಲಿ ಬುಧವಾರ ಆಂಧ್ರ ತಂಡವು 23 ರನ್‌ಗಳ ಮೊದಲ ಇನಿಂಗ್ಸ್‌ ಪಡೆಯುವಲ್ಲಿ ಯಶಸ್ವಿಯಾಯಿತು. ಆಂಧ್ರದ 415 ರನ್‌ಗಳಿಗೆ ಉತ್ತರವಾಗಿ ಕರ್ನಾಟಕದ ಮೊದಲ ಇನಿಂಗ್ಸ್‌ 148.1 ಓವರುಗಳಲ್ಲಿ 392 ರನ್‌ಗಳಿಗೆ ಕೊನೆಗೊಂಡಿತು. ದಿನದಾಟ ಮುಗಿದಾಗ ಆಂಧ್ರ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 36 ರನ್ ಗಳಿಸಿತು.

5 ವಿಕೆಟ್‌ಗೆ 176 ರನ್‌ಗಳೊಡನೆ ಮೂರನೇ ದಿನದಾಟ ಮುಂದುವರಿಸಿದ ಕರ್ನಾಟಕ ತಂಡವನ್ನು ಅಕ್ಷತ್ ಉಪಯುಕ್ತ ಜೊತೆಯಾಟಗಳ ಮೂಲಕ ಕಾಪಾಡಿದರು. ಅವರು ಕೆಳಕ್ರಮಾಂಕದ ಆಟಗಾರ ಧ್ಯಾನ್ ಹಿರೇಮಠ (47) ಜೊತೆ ಅವರು 124 ರನ್ ಸೇರಿಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರು:

ಆಂಧ್ರ: 415 ಮತ್ತು 18.1 ಓವರುಗಳಲ್ಲಿ 2ಕ್ಕೆ 36;

ಕರ್ನಾಟಕ: 148.1 ಓವರುಗಳಲ್ಲಿ 392 (ಧ್ರುವ್ ಕೃಷ್ಣನ್ 28, ಮಣಿಕಾಂತ್‌ ಶಿವಾನಂದ 56, ಸಿದ್ಧಾರ್ಥ ಎ. 83, ರೆಹಾನ್ ಮೊಹಮ್ಮದ್ 26, ಅಕ್ಷತ್ ಪ್ರಭಾಕರ್ 112, ಧ್ಯಾನ್ ಹಿರೇಮಠ 47; ಸಿದ್ದು ಕಾರ್ತಿಕ್ ರೆಡ್ಡಿ 107ಕ್ಕೆ5, ಎನ್‌.ರಾಜೇಶ್‌ 100ಕ್ಕೆ2, ಎ.ಲೋಹಿತ್ 86ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.