ನವದೆಹಲಿ: ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು , ಅವರ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ, ಪತಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಪ್ರತಿ ಸರಣಿ ಬಳಿಕ ತಮ್ಮಲ್ಲಿ ಮಾರ್ಪಾಡು ಮಾಡಿಕೊಂಡು ಪ್ರತಿ ಟೆಸ್ಟ್ ಸರಣಿಯ ನಂತರ ಇನ್ನಷ್ಟು ತಿಳಿವಳಿಕೆ, ವಿನೀತ ಭಾವ ನಿಮ್ಮದಾಗುತಿತ್ತು ಅದನ್ನು ನೋಡುವುದು ಒಂದು ಸೌಭಾಗ್ಯವಾಗಿತ್ತು ಎಂದು ಹೇಳಿದ್ದಾರೆ.
36 ವರ್ಷದ ಕೊಹ್ಲಿ ಸೋಮವಾರ(ಮೇ 12) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇನ್‌ಸ್ಟಾ ಗ್ರಾಂ ಪೋಸ್ಟ್ ಮೂಲಕ ಅವರು ನಿವೃತ್ತಿ ಘೋಷಿಸಿದ್ಧಾರೆ.
123 ಟೆಸ್ಟ್ ಪಂದ್ಯಗಳಿಂದ 46.85 ಸರಾಸರಿಯಲ್ಲಿ 30 ಶತಕಗಳೊಂದಿಗೆ 9,230 ರನ್ ಗಳಿಸಿದ್ದಾರೆ. ಕಳೆದ ವರ್ಷ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಅವರು ಈಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
ಈ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುಷ್ಕಾ, ‘ಎಲ್ಲರೂ ಅವರ(ಕೊಹ್ಲಿ) ದಾಖಲೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ಹೋರಾಟ ಮತ್ತು ಆಟದ ಈ ಸ್ವರೂಪದಲ್ಲಿ ನೀವು ತೋರಿದ ಅಚಲ ಪ್ರೀತಿಯನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ಇದಕ್ಕಾಗಿ ನೀವು ಎಷ್ಟು ಶ್ರಮಪಟ್ಟಿದ್ದೀರಿ ಎಂಬುದು ನನಗೆ ತಿಳಿದಿದೆ. ಪ್ರತಿ ಟೆಸ್ಟ್ ಸರಣಿಯ ನಂತರ, ನೀವು ಪ್ರತಿ ಟೆಸ್ಟ್ ಸರಣಿಯ ನಂತರ ಇನ್ನಷ್ಟು ತಿಳಿವಳಿಕೆ, ವಿನೀತ ಭಾವ ನಿಮ್ಮದಾಗುತಿತ್ತು. ಮತ್ತು ನೀವು ಅದರ ಮೂಲಕ ವಿಕಸನಗೊಳ್ಳುವುದನ್ನು ನೋಡುವುದು ಒಂದು ಸೌಭಾಗ್ಯವಾಗಿತ್ತು’ಎಂದು ಅವರು ಕೊಹ್ಲಿ ಜೊತೆಗಿನ ತಮ್ಮ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ.
ಕಳೆದ ವರ್ಷ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ, ಈಗ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಹೇಳಿದ್ದು, ಇನ್ನುಮುಂದೆ ಏಕದಿನ ಕ್ರಿಕೆಟ್ ಮಾತ್ರ ಆಡಲಿದ್ದಾರೆ.
‘ಶ್ವೇತವಸ್ತ್ರದ (ಟೆಸ್ಟ್ ಕ್ರಿಕೆಟ್) ಮೂಲಕವೇ ನೀವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತೀರಿ ಎಂದು ನಾನು ಸದಾ ಆಲೋಚಿಸುತ್ತಲೇ ಇದ್ದೆ. ನೀವು ನಿಮ್ಮ ಹೃದಯವನ್ನು ಮಾತ್ರ ಅನುಸರಿಸಿದ್ದೀರಿ.ಈ ಸಂದರ್ಭದಲ್ಲಿ ನನ್ನ ಪ್ರೀತಿಯ ನಿಮಗೆ ನಾನು ಏನನ್ನು ಹೇಳಲು ಬಯಸುತ್ತೇನೆಂದರೆ, ನೀವು ಈ ವಿದಾಯದ ಹೊತ್ತಿಗೆ ಪ್ರತಿಯೊಂದನ್ನೂ ಗ:ಈಸಿದ್ದೀರಿ’ ಎಂದಿದ್ದಾರೆ.
2017ರಲ್ಲಿ ವಿವಾಹವಾದ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ವಾಮಿಕಾ (ನಾಲ್ಕು) ಮತ್ತು 15 ತಿಂಗಳ ಮಗ ಅಕಾಯ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.