ADVERTISEMENT

ಆ್ಯಷಸ್ ಅಂತಿಮ ಟೆಸ್ಟ್‌: ಇಂಗ್ಲೆಂಡ್ ತಂಡಕ್ಕೆ ಬಶೀರ್, ಪಾಟ್ಸ್‌

ಪಿಟಿಐ
Published 2 ಜನವರಿ 2026, 13:09 IST
Last Updated 2 ಜನವರಿ 2026, 13:09 IST
ಬೆನ್ ಸ್ಟೋಕ್ಸ್ 
ಬೆನ್ ಸ್ಟೋಕ್ಸ್    

ಸಿಡ್ನಿ: ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್‌ ಮತ್ತು ಸ್ಪಿನ್ನರ್ ಶೋಯೆಬ್ ಬಶೀರ್ ಅವರನ್ನು ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಡುವ ಇಂಗ್ಲೆಂಡ್‌ ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ.

ಆಸ್ಟ್ರೇಲಿಯಾ ಸರಣಿಯಲ್ಲಿ 3–1 ಮುನ್ನಡೆ ಪಡೆದಿದೆ.

ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಎರಡು ದಿನಗಳಲ್ಲಿ ಗೆದ್ದಿರುವ ಪ್ರವಾಸಿ ಇಂಗ್ಲೆಂಡ್ ತಂಡ ಈಗ ಸರಣಿಯನ್ನು ಇನ್ನೊಂದು ಯಶಸ್ಸಿನೊಡನೆ ಮುಗಿಸುವ ಉತ್ಸಾಹದಲ್ಲಿದೆ. ಮೂಲ 16ರ ತಂಡದಲ್ಲಿದ್ದ ಪಾಟ್ಸ್‌  ಇದುವರೆಗೆ ಆಡುವ ಅವಕಾಶ ಪಡೆದಿರಲಿಲ್ಲ. ಮೆಲ್ಬರ್ನ್‌ ಟೆಸ್ಟ್‌ ಪಂದ್ಯದಲ್ಲಿ ಗಸ್ ಅಟ್ಕಿನ್ಸನ್ ಗಾಯಾಳಾದ ಕಾರಣ ಪಾಟ್ಸ್‌ ಆಡುವ ಸಂಭವವಿದೆ.

ADVERTISEMENT

ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್‌ ಈ ಮೊದಲೇ ಗಾಯಾಳುಗಳ ಪಟ್ಟಿಗೆ ಸೇರಿದ್ದಾರೆ. ಮೊಣಕಾಲು ನೋವಿನಿಂದಾಗಿ ವುಡ್‌ ಮೊದಲ ಟೆಸ್ಟ್‌ನಲ್ಲಿ ಮಾತ್ರ ಆಡಿದ್ದರು. ಪಕ್ಕೆಲುಬಿನ ನೋವಿನ ಕಾರಣ ಆರ್ಚರ್ ಮೂರನೇ ಟೆಸ್ಟ್‌ ನಂತರ ಆಡಿಲ್ಲ.

ಬಶೀರ್ ಮತ್ತು ವಿಲ್‌ ಜಾಕ್ಸ್‌ ಇವರಲ್ಲಿ ಒಬ್ಬರು ಆಡುವ ಸಾಧ್ಯತೆ ಅಧಿಕವಾಗಿದೆ. ಸರಣಿಯನ್ನು 3–2ರಲ್ಲಿ ಮುಗಿಸಲು ಸಾಧ್ಯವಾದರೆ ಅದು ನಮಗೆ ಉತ್ತಮ ಸರಣಿಯಾಗಲಿದೆ ಎಂದು ಇಂಗ್ಲೆಂಡ್ ಆರಂಭ ಆಟಗಾರ ಜಾಕ್ ಕ್ರಾಲಿ ಹೇಳಿದ್ದಾರೆ.

ತಂಡ ಇಂತಿದೆ:

ಬೆನ್ ಸ್ಟೋಕ್ಸ್‌ (ನಾಯಕ), ಶೋಯೆಬ್ ಬಶೀರ್‌, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್‌, ಬ್ರೈಡನ್ ಕಾರ್ಸ್, ಜಾಕ್ ಕ್ರಾಲಿ, ಬೆನ್ ಡಕೆಟ್‌, ವಿಲ್ ಜಾಕ್ಸ್, ಮ್ಯಾಥ್ಯೂ ಪಾಟ್ಸ್‌, ಜೋ ರೂಟ್‌, ಜೇಮಿ ಸ್ಮಿತ್ ಮತ್ತು ಜೋಶ್ ಟಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.