ADVERTISEMENT

Ashes Test: ಸ್ಫೋಟಕ ಶತಕದ ಮೂಲಕ ದಿಗ್ಗಜ ಆಟಗಾರರ ಸಾಲಿಗೆ ಸೇರಿದ ಟ್ರಾವಿಸ್ ಹೆಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 7:43 IST
Last Updated 19 ಡಿಸೆಂಬರ್ 2025, 7:43 IST
<div class="paragraphs"><p>ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಶತಕ ಸಂಭ್ರಮ&nbsp; &nbsp;–&nbsp; ಪಿಟಿಐ ಚಿತ್ರ</p></div>

ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಶತಕ ಸಂಭ್ರಮ   –  ಪಿಟಿಐ ಚಿತ್ರ

   

ಅಡಿಲೇಡ್: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ ಬಿಗಿ ಹಿಡಿತ ಸಾಧಿಸಿದೆ. 85 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 271 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದೆ.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು 10 ರನ್‌ಗಳಿಸಿ ನಿರಾಸೆ ಅನುಭವಿಸಿದ್ದ ಟ್ರಾವಿಸ್ ಹೆಡ್‌, ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೂರನೇ ದಿನದಾಟದಲ್ಲಿ 2 ಸಿಕ್ಸರ್ ಹಾಗೂ 13 ಬೌಂಡರಿ ಸಹಿತ 142 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಆ ಮೂಲಕ ದಿಗ್ಗಜ ಆಟಗಾರರ ಸಾಲಿಗೆ ಸೇರಿದ್ದಾರೆ.

ADVERTISEMENT

ಸತತ 4 ಶತಕ

ಅಡಿಲೇಡ್ ಮೈದಾನದಲ್ಲಿ ನಡೆದ ಕಳೆದ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ 4 ಶತಕ ಸಿಡಿಸುವ ಮೂಲಕ ಮೈಕಲ್ ಕ್ಲಾರ್ಕ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಅವರು, 2022ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 175 ರನ್ಸ್, 2024ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ 119 ರನ್ಸ್, 2024ರಲ್ಲಿ ಭಾರತ ವಿರುದ್ಧ 140 ರನ್ಸ್ ಹಾಗೂ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 142 ರನ್ಸ್ ಗಳಿಸುವ ಮೂಲಕ ಅಡಿಲೇಡ್ ಮೈದಾನದಲ್ಲಿ ಸತತ 4 ಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಸಾಧನೆ ಮಾಡಿದರು.

ಆಸ್ಟ್ರೇಲಿಯಾದ ಮೈದಾನವೊಂದರಲ್ಲಿ ಸತತ 4 ಶತಕ

ಇಂದಿನ ಶತಕದ ಮೂಲಕ ಆಸ್ಟ್ರೇಲಿಯಾದ ಮೈದಾನವೊಂದರಲ್ಲಿ ಸತತ 4 ಶತಕಗಳನ್ನು ಸಿಡಿಸಿದ 4ನೇ ಆಟಗಾರ ಎಂಬ ದಾಖಲೆ ಮಾಡಿದರು. ಇದಕ್ಕೂ ಮೊದಲು, ಡಾನ್ ಬ್ರಾಡ್‌ಮನ್ ಅವರು ಮೆಲ್ಬರ್ನ್ ಮೈದಾನದಲ್ಲಿ, ಇಂಗ್ಲೆಂಡ್‌ನ ವಾಲಿ ಹಮ್ಮೊಂಡ್ ಅವರು ಸಿಡ್ನಿ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು.

ಮಿಚಲ್ ಕ್ಲಾರ್ಕ್ ಅವರು ಅಡಿಲೇಡ್ ಮೈದಾನದಲ್ಲಿ ಹಾಗೂ ಸ್ಟೀವನ್ ಸ್ಮಿತ್ ಅವರು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಸತತ 4 ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಇದೀಗ ಟ್ರಾವಿಸ್ ಹೆಡ್‌ ಅವರು ಅಡಿಲೇಡ್ ಅಂಗಳದಲ್ಲಿ ಸತತ ನಾಲ್ಕು ಶತಕ ಸಿಡಿಸುವ ಮೂಲಕ ದಿಗ್ಗಜರ ಸಾಲಿಗೆ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.