ADVERTISEMENT

ವಿರಾಟ್ ಸೆಂಚುರಿ ನೋಡಲು ಬಂದಿದ್ದ ಪಾಕ್‌ನ ಮಹಿಳಾ ಅಭಿಮಾನಿಗೆ ನಿರಾಸೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2023, 11:29 IST
Last Updated 3 ಸೆಪ್ಟೆಂಬರ್ 2023, 11:29 IST
<div class="paragraphs"><p>ಪಾಕಿಸ್ತಾನದ ಅಭಿಮಾನಿ.</p></div>

ಪಾಕಿಸ್ತಾನದ ಅಭಿಮಾನಿ.

   

(ಚಿತ್ರ ಕೃಪೆ: X/@mufaddal_vohra)

ಬೆಂಗಳೂರು: ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಇದರಿಂದಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು.

ADVERTISEMENT

ಶ್ರೀಲಂಕಾದ ಪಲೀಕೆಲೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 266 ರನ್ನಿಗೆ ಆಲೌಟ್ ಆಗಿತ್ತು. ಬಳಿಕ ಸುರಿದ ಸತತ ಮಳೆಯಿಂದಾಗಿ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗದೇ ಪಂದ್ಯವನ್ನು ಕೈಬಿಡಲಾಯಿತು.

ಈ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ನಾಲ್ಕು ರನ್ ಗಳಿಸಿ ಔಟ್ ಆಗಿದ್ದರು. ಅತ್ತ ವಿರಾಟ್ ಆಟವನ್ನೇ ನೋಡಲೆಂದು ಬಂದ ಪಾಕಿಸ್ತಾನದ ಮಹಿಳಾ ಅಭಿಮಾನಿಗೂ ನಿರಾಸೆ ಕಾದಿತ್ತು.

ಈ ಸಂಬಂಧ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಅವರ ಆಟ ನೋಡಲೆಂದೇ ನಾನು ಇಲ್ಲಿಗೆ ಬಂದಿದ್ದೇನೆ. ವಿರಾಟ್ ಶತಕ ಬಾರಿಸಲಿದ್ದಾರೆ ಎಂದು ನಿರೀಕ್ಷೆ ಮಾಡಿದ್ದೆ. ಆದರೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡವನ್ನು ಬೆಂಬಲಿಸುವುದಾಗಿ ಮಹಿಳಾ ಅಭಿಮಾನಿ ತಿಳಿಸಿದ್ದಾರೆ. ತನ್ನ ಒಂದು ಕೆನ್ನೆಯಲ್ಲಿ ಪಾಕಿಸ್ತಾನ ಇನ್ನೊಂದು ಕೆನ್ನೆಯಲ್ಲಿ ಭಾರತದ ತ್ರಿವರ್ಣ ಧ್ವಜ ಹಚ್ಚಿರುವುದನ್ನು ತೋರಿಸಿದರು.

ಈ ಸಂದರ್ಭದಲ್ಲಿ ಹತ್ತಿರದಲ್ಲಿದ್ದ ಅಭಿಮಾನಿಯೊಬ್ಬರು ಟೀಕಿಸಿದಾಗ, 'ನೆರೆಹೊರೆಯವರನ್ನು ಪ್ರೀತಿಸುವುದರಲ್ಲಿ ತಪ್ಪೇನಿಲ್ಲ' ಎಂದು ಉತ್ತರಿಸಿದ್ದಾರೆ.

ಕೊನೆಯದಾಗಿ ವಿರಾಟ್ ಹಾಗೂ ಬಾಬರ್ ನಡುವೆ ಯಾರನ್ನು ಆಯ್ಕೆ ಮಾಡುವೀರಿ ಎಂದು ಕೇಳಿದಾಗ ಕೊಹ್ಲಿ ಎಂದೇ ನಗುಮುಖದಿಂದಲೇ ಹೇಳಿದ್ದಾರೆ.

ಈ ಮೂಲಕ ಪಾಕಿಸ್ತಾನದ ಈ ಮಹಿಳಾ ಕ್ರಿಕೆಟ್ ಅಭಿಮಾನಿ ಭಾರತೀಯ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.