ADVERTISEMENT

ಶ್ರೀಲಂಕಾ ವಿರುದ್ಧವೂ ಅಬ್ಬರದ ಅರ್ಧಶತಕ: ಏಷ್ಯಾ ಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2025, 9:09 IST
Last Updated 27 ಸೆಪ್ಟೆಂಬರ್ 2025, 9:09 IST
<div class="paragraphs"><p>ಅಭಿಷೇಕ್ ಶರ್ಮಾ</p></div>

ಅಭಿಷೇಕ್ ಶರ್ಮಾ

   

ದುಬೈ: ಏಷ್ಯಾ ಕಪ್ 2025ರಲ್ಲಿ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಸಿಸಿ ಟಿ–20 ಶ್ರೇಯಾಂಕದಲ್ಲಿ ನಂ.1 ಬ್ಯಾಟರ್ ಆಗಿರುವ ಅವರು ನಿನ್ನೆ (ಶುಕ್ರವಾರ) ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

ಪಂದ್ಯದಲ್ಲಿ ಒಟ್ಟು 31 ಎಸೆತಗಳಲ್ಲಿ 61 ರನ್​ ಸಿಡಿಸಿದ ಅವರು ಟಿ–20 ಏಷ್ಯಾಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ದಾಖಲೆ ಮಾಡಿದರು. ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ ಅವರ ಹೆಸರಿನಲ್ಲಿತ್ತು.

ADVERTISEMENT

ಮೊಹಮ್ಮದ್ ರಿಜ್ವಾನ್ ಏಷ್ಯಾ ಕಪ್ ಟಿ–20 ಮಾದರಿಯಲ್ಲಿ 281 ರನ್‌ ಸಿಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ 34 ರನ್ ಹೊಡೆಯುತ್ತಿದ್ದಂತೆ ರಿಜ್ವಾನ್ ಅವರ ದಾಖಲೆಯನ್ನು ಅಭಿಷೇಕ್ ಮುರಿದರು. ಸದ್ಯ, ಅಭಿಷೇಕ್ ಶರ್ಮಾ ಅವರು 6 ಪಂದ್ಯಗಳಿಂದ 309 ರನ್ ಕಲೆ ಹಾಕಿದ್ದು, ಈ ಬಾರಿಯ ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಫೈನಲ್‌ನಲ್ಲೂ ಅವರ ಮೇಲೆ ಅಪಾರ ನಿರೀಕ್ಷೆ ಇಡಲಾಗಿದೆ.

ನಿನ್ನೆಯ ಪಂದ್ಯದಲ್ಲಿ 61 ರನ್ ಸಿಡಿಸುವ ಮೂಲಕ ಟೂರ್ನಿಯಲ್ಲಿ 300ಕ್ಕೂ ಅಧಿಕ ರನ್ ಸಿಡಿಸಿದರು. ಆ ಮೂಲಕ ಏಷ್ಯಾ ಕಪ್ ಟಿ–20 ಇತಿಹಾಸದಲ್ಲಿ 300 ಕ್ಕಿಂತ ಅಧಿಕ ರನ್ ಬಾರಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದರು.

ಕೊಹ್ಲಿ ದಾಖಲೆ ಅಳಿಸಿದ ಅಭಿಷೇಕ್ ಶರ್ಮಾ

ಏಷ್ಯಾಕಪ್​​ನಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೂ ಅಭಿಷೇಕ್ ಪಾತ್ರರಾದರು. ಇದಕ್ಕೂ ಮೊದಲ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಅವರು 2022ರಲ್ಲಿ 276 ರನ್‌ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.