ADVERTISEMENT

Asia Cup: ದುಬೈಗೆ ವಾಪಸ್ಸಾದ ವೆಲ್ಲಾಳಗೆ: ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಲಭ್ಯ

ಪಿಟಿಐ
Published 20 ಸೆಪ್ಟೆಂಬರ್ 2025, 7:46 IST
Last Updated 20 ಸೆಪ್ಟೆಂಬರ್ 2025, 7:46 IST
<div class="paragraphs"><p>ದುನಿತ್ ವೆಲ್ಲಾಳಗೆ ಸಂತೈಸಿದ ಕೋಚ್ ಜಯಸೂರ್ಯ</p></div>

ದುನಿತ್ ವೆಲ್ಲಾಳಗೆ ಸಂತೈಸಿದ ಕೋಚ್ ಜಯಸೂರ್ಯ

   

ದುಬೈ: ಅಫ್ಗಾನಿಸ್ತಾನ ವಿರುದ್ಧದ ಕೊನೆಯ ಲೀಗ್ ಪಂದ್ಯದ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಯುವ ಆಲ್‌ರೌಂಡರ್ ದುನಿತ್ ವೆಲ್ಲಾಳಗೆ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹಾಗಾಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತವರಿಗೆ ಆಗಮಿಸಿದ್ದರು. ಇದೀಗ ಮತ್ತೆ ಅವರು ತಮ್ಮ ತಂಡ ಸೇರಿಕೊಂಡಿದ್ದಾರೆ.

ಶ್ರೀಲಂಕಾದಿಂದ ದುಬೈಗೆ ಆಗಮಿಸಿರುವ ಅವರು ಇಂದು (ಶನಿವಾರ) ನಡೆಯಲಿರುವ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಲಭ್ಯವಿದ್ದಾರೆ. ವೆಲ್ಲಾಳಗೆ ತಂದೆ ಸುರಂಗ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಆ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನ ವಿರುದ್ಧದ ಪಂದ್ಯದ ಬಳಿಕ ತವರಿಗೆ ಮರಳಿದ್ದರು.

ADVERTISEMENT

ಅಫ್ಗಾನಿಸ್ತಾನ ವಿರುದ್ಧದ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ವೆಲ್ಲಾಳಗೆಗೆ ತಂದೆ ನಿಧನದ ಸುದ್ದಿ ತಿಳಿಸಲಾಯಿತು. ಬಳಿಕ ಕೊಲಂಬೋಗೆ ಲಭ್ಯವಿರುವ ವಿಮಾನದ ಮೂಲಕ ತವರಿಗೆ ಆಗಮಿಸಿದ್ದರು. ಬಳಿಕ ತಂದೆಯ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ಶುಕ್ರವಾರ ರಾತ್ರಿ ತಂಡದ ವ್ಯವಸ್ಥಾಪಕ ಮಹಿಂದ ಹಲಂಗೋಡ್ ಅವರೊಂದಿಗೆ ಯುಎಇಗೆ ವಾಪಾಸ್ಸಾದರು.

ಶ್ರೀಲಂಕಾ ತಂಡ ಬಲಿಷ್ಠವಾಗಿದ್ದು, ಇಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದ ನಂತರ, ಸೆ. 23 ರಂದು ಪಾಕಿಸ್ತಾನ ಮತ್ತು ಸೆ. 26 ರಂದು ಭಾರತ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.