ದುಬೈ: ಒಂದು ವೇಳೆ ಭಾರತವು ಏಷ್ಯಾ ಕಪ್ ಫೈನಲ್ ಪ್ರವೇಶಿಸಿದರೆ, ಅವರನ್ನು ಸೋಲಿಸಿ ನಾವು ಪ್ರಶಸ್ತಿ ಗೆಲ್ಲುತ್ತೇವೆ ಎಂದು ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ.
ಅಬುಧಾಬಿಯಲ್ಲಿ ಮಂಗಳವಾರ(ಸೆ.23) ನಡೆದ ಸೂಪರ್–4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನವು 5 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಈ ಮೂಲಕ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
‘ನಾವು ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಬಂದಿದ್ದೇವೆ. ಫೈನಲ್‌ನಲ್ಲಿ ಯಾವುದೇ ತಂಡವು ಎದುರಾದರೂ ನಾವು ಅವರನ್ನು ಸೋಲಿಸಲಿದ್ದೇವೆ’ ಎಂದು ಶಾಹೀನ್ ಅಫ್ರಿದಿ ಹೇಳಿದ್ದಾರೆ.
ಎರಡೂ ದೇಶಗಳ ನಡುವೆ 15 ಟಿ–20 ಪಂದ್ಯಗಳು ಜರುಗಿದ್ದು, 12ರಲ್ಲಿ ಭಾರತವು ಗೆಲುವು ಸಾಧಿಸಿದೆ. 2022 ರಿಂದ ಉಭಯ ತಂಡಗಳು 4 ಟಿ–20 ಹಾಗೂ 3 ಏಕದಿನ ಪಂದ್ಯ ಸೇರಿದಂತೆ ಏಳು ಬಾರಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲೂ ಭಾರತವು ಪಾಕಿಸ್ತಾನವನ್ನು ಸೋಲಿಸಿದೆ.
ಯುಎಇ ಅಲ್ಲಿ ಜರುಗುತ್ತಿರುವ 17ನೇ ಆವೃತ್ತಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನವು ಭಾರತವನ್ನು ಎರಡು ಬಾರಿ ಎದುರಿಸಿದ್ದು, ಎರಡರಲ್ಲೂ ಸೂರ್ಯಕುಮಾರ್ ನಾಯಕತ್ವದ ತಂಡ ಗೆಲುವು ಸಾಧಿಸಿದೆ. ಎರಡೂ ತಂಡಗಳು ಮತ್ತೊಮ್ಮೆ ಭಾನುವಾರ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆಯಿದೆ.
ಪಾಕ್ ವಿರುದ್ದದ ಪಂದ್ಯದ ಬಳಿಕ ಭಾರತದ ಆಟಗಾರರು ಹಸ್ತಲಾಘವ ಮಾಡದೇ ಇರುವುದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ತೀವ್ರತೆಯನ್ನು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.