ADVERTISEMENT

ವಾರ್ನರ್ ಶತಕ, ಖ್ವಾಜಾ ಅರ್ಧ ಶತಕದ ನೆರವಿನಿಂದ 381 ರನ್ ಕಲೆಹಾಕಿದ ಆಸೀಸ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 15:39 IST
Last Updated 20 ಜೂನ್ 2019, 15:39 IST
   

ನಾಟಿಂಗಂ: ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ಆರಂಭಿಕ ದಾಂಡಿಗ ವಾರ್ನರ್ ಅವರ ಆಕರ್ಷಕ ಶತಕ ಮತ್ತು ಖ್ವಾಜಾ ಅವರ ಅರ್ಧಶತಕದನೆರವಿನಿಂದ 5 ವಿಕೆಟ್ ನಷ್ಟಕ್ಕೆ 381ರನ್ ಕಲೆ ಹಾಕಿದೆ.

110 ಎಸೆತಗಳಲ್ಲಿ ಡೇವಿಡ್ ವಾರ್ನರ್ ಶತಕ ಪೂರೈಸಿದ್ದಾರೆ.ವಾರ್ನರ್, ಏಕದಿನ ಪಂದ್ಯಗಳಲ್ಲಿ 16 ನೇ ಮತ್ತು ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಾಖಲಿಸಿದ 2ನೇ ಶತಕ ಇದಾಗಿದೆ.

ಅರ್ಧ ಶತಕಬಾರಿಸಿದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಮೊದಲು ವಿಕೆಟ್ ಕಳೆದು ಕೊಂಡಿದ್ದಾರೆ.51 ಎಸೆತಗಳನ್ನು ಎದುರಿಸಿ 53 ರನ್ ಗಳಿಸಿದ ಫಿಂಚ್‌ನ್ನು ಸೌಮ್ಯ ಸರ್ಕಾರ್ ಎಸೆತದಲ್ಲಿ ರುಬೇಲ್ ಹೊಸೆನ್ ಕ್ಯಾಚ್ ಹಿಡಿದು ಔಟ್ ಮಾಡಿದ್ದಾರೆ.

ADVERTISEMENT

ಆರಂಭದಲ್ಲಿಯೇ ಲಯ ಕಂಡುಕೊಂಡ ಆಸ್ಟ್ರೇಲಿಯಾ ಫಿಂಚ್ ಔಟಾದ ನಂತರಡೇವಿಡ್ ವಾರ್ನರ್ - ಉಸ್ಮಾನ್ ಖ್ವಾಜಾ ಜೊತೆಯಾದೊಂದಿಗೆ ಅದ್ಭುತ ಪ್ರದರ್ಶನ ನೀಡಿತು. ಆದರೆ 45ನೇ ಓವರ್‌ನಲ್ಲಿಸೌಮ್ಯ ಸರ್ಕಾರ್ ಎಸೆತದಲ್ಲಿ ರುಬೇಲ್ ಹೊಸೆನ್ ಕ್ಯಾಚಿತ್ತು ವಾರ್ನರ್ (166)ಔಟಾದರು. ನಂತರ ಬಂದಗ್ಲೆನ್ ಮ್ಯಾಕ್ಸ್‌ವೆಲ್ ಆರಂಭದಲ್ಲಿಯೇ ಬೌಂಡರಿ, ಸಿಕ್ಸರ್ ಸಿಡಿಸಿ, ಖ್ವಾಜಾ ಅವರಿಗೆ ಉತ್ತಮ ಸಾಥ್ ನೀಡಿದರು. 47ನೇ ಓವರ್‌ನಲ್ಲಿರುಬೇಲ್ ಮ್ಯಾಕ್ಸ್‌ವೆಲ್‌ನ್ನು ರನೌಟ್ ಮಾಡುವ ಮೂಲಕ ಆಸೀಸ್ ರನ್ ಓಟಕ್ಕೆ ಕಡಿವಾಣ ಹಾಕಿದರು. 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 10 ಎಸೆತಗಳಲ್ಲಿ ಮ್ಯಾಕ್ಸ್‌ವೆಲ್ 32 ರನ್ ದಾಖಲಿಸಿದ್ದಾರೆ. ಈ ವಿಕೆಟ್ ಬೆನ್ನಲ್ಲೇ ಅಂದರೆ ನಂತರದ ಎರಡು ಎಸೆತದಲ್ಲಿ ಸೌಮ್ಯ ಸರ್ಕಾರ್, ಖ್ವಾಜಾ ಅವರ ವಿಕೆಟ್ ಕಬಳಿಸಿದರು. 72 ಎಸೆತಗಳಲ್ಲಿ 89 ರನ್‌ಗಳಿಸಿದ್ದಾರೆ ಖ್ವಾಜಾ.

ಇದಾದ ನಂತರ ಬಂದ ಎಸ್‌ಪಿಡಿ ಸ್ಮಿತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಮುಸ್ತಫಿಜುರ್ ರೆಹಮಾನ್ ಎಸೆತಕ್ಕೆ ಎಲ್‌ಬಿಡಬ್ಲ್ಯೂ ಆಗುವಮೂಲಕ ಸ್ಮಿತ್ (2)ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಇವರ ನಂತರ ಕ್ರೀಸ್‌ಗಿಳಿದಎಂಪಿ ಸ್ಟೊಯಿನಿಸ್ (17) ಮತ್ತುಮಿಷೆಲ್ ಸ್ಟಾರ್ಕ್ (11) ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಮಳೆ ಬರುವ ಲಕ್ಷಣ ಕಾಣಿಸಿಕೊಂಡ ಕಾರಣ 49ನೇ ಓವರ್ ನಂತರ 10 ನಿಮಿಷಗಳ ಕಾಲ ಪಂದ್ಯಕ್ಕೆ ಬ್ರೇಕ್ ನೀಡಲಾಗಿತ್ತು.

ಬಾಂಗ್ಲಾದೇಶದ ಪರವಾಗಿ ಸೌಮ್ಯ ಸರ್ಕಾರ್ - 3,ಮುಸ್ತಫಿಜುರ್ ರೆಹಮಾನ್- 1 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.