ADVERTISEMENT

ಮಹಿಳಾ ವಿಶ್ವಕಪ್: ಆಸ್ಟ್ರೇಲಿಯಾಗೆ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 10:36 IST
Last Updated 8 ಮಾರ್ಚ್ 2020, 10:36 IST
ಆಸ್ಟ್ರೇಲಿಯಾ ತಂಡದ ಸಂಭ್ರಮಾಚರಣೆ
ಆಸ್ಟ್ರೇಲಿಯಾ ತಂಡದ ಸಂಭ್ರಮಾಚರಣೆ   

ಮೆಲ್ಬರ್ನ್‌:ಮಹಿಳಾ ವಿಶ್ವಕಪ್ ಟಿ20 ಫೈನಲ್ ಪಂದ್ಯದಲ್ಲಿ ಭಾರತವನ್ನು 85 ರನ್‌ಗಳಿಂದ ಪರಾಭವಗೊಳಿಸಿ ಆಸ್ಟ್ರೇಲಿಯಾ ವನಿತಾ ತಂಡ ವಿಶ್ವಕಪ್ ಗೆದ್ದುಕೊಂಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 184 ರನ್‌ ದಾಖಲಿಸಿತ್ತು.

ಈವರೆಗಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮೊದಲ ಓವರ್‌ನಲ್ಲಿ ಔಟಾಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಸ್ಮೃತಿ ಮಂದಾನಾ, ಜೆಮಿಮಾ ರಾಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌ ವಿಕೆಟ್ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಆಡಿದ್ದ ತಾನಿಯಾ ಭಾಟಿಯಾ ಗಾಯಗೊಂಡು ಹೊರನಡೆಯಬೇಕಾಗಿ ಬಂತು.

ADVERTISEMENT

ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡ ನಂತರ ದೀಪ್ತಿ ಶರ್ಮಾ ಮತ್ತು ವೇದಾ ಕೃಷ್ಣಮೂರ್ತಿ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿದ್ದರೂ 12ನೇ ಓವರ್‌ನಲ್ಲಿ ವೇದಾ ವಿಕೆಟ್ ಪತನಗೊಳ್ಳುವ ಮೂಲಕ ಭಾರತದ ವನಿತಾ ತಂಡ ಮತ್ತಷ್ಟು ಒತ್ತಡಕ್ಕೊಳಗಾಯಿತು. ವೇದಾ - 19,ದೀಪ್ತಿ ಶರ್ಮಾ-33, ರಿಚಾ 18ರನ್ ಗಳಿಸಿ ಭಾರತದ ರನ್ ಏರಿಕೆಗೆ ನೆರವಾದರೆ ಇನ್ನುಳಿದ ಆಟಗಾರ್ತಿಯರು ದಾಖಲಿಸಿದರ ರನ್ ಎರಡಂಕಿ ದಾಟಲಿಲ್ಲ.

ಆಸ್ಟ್ರೇಲಿಯಾ ತಂಡದ ಕರಾರುವಕ್ಕಾದ ಬೌಲಿಂಗ್ ಮುಂದೆ ತತ್ತರಿಸಿದ ಭಾರತ ತಂಡ 19.1 ನೇ ಓವರ್‌ನಲ್ಲಿ 99 ರನ್ ದಾಖಲಿಸಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್
ಶಫಾಲಿ ವರ್ಮಾ - 2 ರನ್
ಸ್ಮೃತಿ ಮಂದಾನಾ - 11 ರನ್
ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌) - 2 ರನ್
ಜೆಮಿಮಾ ರಾಡ್ರಿಗಸ್‌ - 0
ಹರ್ಮನ್‌ಪ್ರೀತ್‌ ಕೌರ್‌ -4
ವೇದಾ ಕೃಷ್ಣಮೂರ್ತಿ -19
ದೀಪ್ತಿ ಶರ್ಮಾ -33
ರಿಚಾ ಘೋಷ್ - 18
ಶಿಖಾ ಪಾಂಡೆ -1
ರಾಧಾ ಯಾದವ್- 1
ರಾಜೇಶ್ವರಿ ಗಾಯಕ್‌ವಾಡ್-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.