ಸ್ಟೀವ್ ಸ್ಮಿತ್
(ಚಿತ್ರ ಕೃಪೆ: X/@cricketcomau)
ಗಾಲೆ: ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್, ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಸಾಧನೆ ಮಾಡಿದ್ದಾರೆ.
ಆ ಮೂಲಕ ಈ ಮೈಲಿಗಲ್ಲು ತಲುಪಿದ ಆಸ್ಟ್ರೇಲಿಯಾದ ನಾಲ್ಕನೇ ಹಾಗೂ ಒಟ್ಟಾರೆಯಾಗಿ ವಿಶ್ವದ 15ನೇ ಬ್ಯಾಟರ್ ಎನಿಸಿದ್ದಾರೆ.
ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಸ್ಮರಣೀಯ ಸಾಧನೆ ಮಾಡಿದ್ದಾರೆ.
ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿರುವ ಸ್ಮಿತ್, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಟ್ರಾವಿಸ್ ಹೆಡ್ ಹಾಗೂ ಉಸ್ಮಾನ್ ಖ್ವಾಜಾ ಮೊದಲ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ಕಟ್ಟಿದರು. ಟ್ರಾವಿಸ್ 40 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು.
ತಾಜಾ ವರದಿಯ ವೇಳೆಗೆ ಆಸ್ಟ್ರೇಲಿಯಾ 32 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ. ಉಸ್ಮಾನ್ ಖ್ವಾಜಾ 65 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಮಾರ್ನಸ್ ಲಾಬುಷೇನ್ (20) ಔಟ್ ಆದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಸ್ಮಿತ್ ಮೈಲಿಗಲ್ಲಿಗೆ ಕೇವಲ ಒಂದು ರನ್ನಿನ ಅವಶ್ಯಕತೆಯಿತ್ತು. ಬಳಿಕ ತಾವು ಎದುರಿಸಿದ ಮೊದಲ ಎಸತದಲ್ಲೇ ಒಂಟಿ ರನ್ ಗಳಿಸುವ ಮೂಲಕ 10,000 ರನ್‌ಗಳ ಮೈಲಿಗಲ್ಲು ತಲುಪಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಸಾಧಕರು:
ಸಚಿನ್ ತೆಂಡೂಲ್ಕರ್ (ಭಾರತ): 15,921
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 13,378
ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ): 13,289
ರಾಹುಲ್ ದ್ರಾವಿಡ್ (ಭಾರತ): 13,288
ಜೋ ರೂಟ್ (ಇಂಗ್ಲೆಂಡ್): 12,972
ಆಲಿಸ್ಟಾರ್ ಕುಕ್ (ಇಂಗ್ಲೆಂಡ್): 12,472
ಕುಮಾರ ಸಂಗಕ್ಕರ (ಶ್ರೀಲಂಕಾ): 12,400
ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್): 11,953
ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್): 11,867
ಮಹೇಲಾ ಜಯವರ್ಧನೆ (ಶ್ರೀಲಂಕಾ): 11,814
ಅಲನ್ ಬಾರ್ಡರ್ (ಆಸ್ಟ್ರೇಲಿಯಾ): 11,174
ಸ್ಟೀವ್ ವ್ಹಾ (ಆಸ್ಟ್ರೇಲಿಯಾ): 10,927
ಸುನಿಲ್ ಗವಾಸ್ಕರ್ (ಭಾರತ): 10,122
ಯೂನಿಸ್ ಖಾನ್ (ಪಾಕಿಸ್ತಾನ): 10,099
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 10,000
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.