ADVERTISEMENT

ಪಾಕಿಸ್ತಾನ ಟಿ20 ತಂಡದಿಂದ ರಿಜ್ವಾನ್, ಬಾಬರ್ ಹೊರಕ್ಕೆ

ಪಿಟಿಐ
Published 4 ಮಾರ್ಚ್ 2025, 11:09 IST
Last Updated 4 ಮಾರ್ಚ್ 2025, 11:09 IST
<div class="paragraphs"><p>ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್</p></div>

ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್

   

(ಪಿಟಿಐ ಚಿತ್ರ)

ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಬೆನ್ನಲ್ಲೇ ಪಾಕಿಸ್ತಾನ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ADVERTISEMENT

ಮುಂಬರುವ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಯಿಂದ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಅವರನ್ನು ಕೈಬಿಡಲಾಗಿದೆ.

ಟಿ20 ಸರಣಿಯಲ್ಲಿ ರಿಜ್ವಾನ್ ಬದಲು ನೂತನ ನಾಯಕನನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೆಸರಿಸಿದೆ. ಸಲ್ಮಾನ್ ಅಲಿ ಅಘಾ ತಂಡವನ್ನು ಮುನ್ನಡೆಸಲಿದ್ದು, ಶದಾಬ್ ಖಾನ್ ಅವರಿಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ.

ಹಾಗಿದ್ದರೂ ಏಕದಿನ ತಂಡದಲ್ಲಿ ರಿಜ್ವಾನ್ ಅವರನ್ನು ನಾಯಕರಾಗಿ ಉಳಿಸಲಾಗಿದೆ. ಏಕದಿನ ತಂಡದಲ್ಲಿ ಬಾಬರ್ ಆಜಂ ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಸೌದ್ ಶಕೀಲ್ ಮತ್ತು ಕಮ್ರಾನ್ ಗುಲಾಂ ಅವರನ್ನು ಕೈಬಿಡಲಾಗಿದೆ.

ಏಕದಿನ ತಂಡದಿಂದ ವೇಗದ ಬೌಲರ್‌ಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರವೂಫ್ ಅವರನ್ನು ಕೈಬಿಡಲಾಗಿದೆ.

ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಭಾಗವಹಿಸಲಿದೆ. ಮಾರ್ಚ್ 16ರಿಂದ ಸರಣಿ ಆರಂಭವಾಗಲಿದೆ.

ಗಾಯದ ಹಿನ್ನೆಲೆಯಲ್ಲಿ ಸೈಮ್ ಅಯುಬ್ ಮತ್ತು ಫಖಾರ್ ಜಮಾನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್, ಆತಿಥೇಯ ಪಾಕಿಸ್ತಾನ ಗುಂಪು ಹಂತದಿಂದಲೇ ನಿರ್ಗಮಿಸಿತ್ತು. ಭಾರತದ ವಿರುದ್ಧವೂ ಸೋಲನುಭವಿಸಿತ್ತು. ಇದರಿಂದ ಭಾರಿ ಟೀಕೆಗೆ ಒಳಗಾಗಿತ್ತು.

ಪಾಕಿಸ್ತಾನ ಏಕದಿನ ತಂಡ ಇಂತಿದೆ:

ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪನಾಯಕ), ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಅಕೀಫ್ ಜಾವೇದ್, ಬಾಬರ್ ಆಜಂ, ಫಹೀಮ್ ಅಶ್ರಫ್, ಇಮ್ರಾನ್ ಉಲ್ ಹಕ್, ಖುಷ್‌ದಿಲ್ ಶಾ, ಮುಹಮ್ಮದ್ ಅಲಿ, ಮುಹಮ್ಮದ್ ವಾಸೀಮ್ ಜೂನಿಯರ್, ಮುಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ ಸೂಫಿಯಾನ್, ಮುಖೀಮ್, ತಯ್ಯಬ್ ತಾಹೀರ್.

ಪಾಕಿಸ್ತಾನ ಟಿ20 ತಂಡ ಇಂತಿದೆ:

ಸಲ್ಮಾನ್ ಅಲಿ ಅಘಾ (ನಾಯಕ), ಶದಾಬ್ ಖಾನ್ (ಉಪನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರವೂಫ್, ಹಸನ್ ನವಾಜ್, ಜಹಾನ್‌ದಾದ್ ಖಾನ್, ಖುಷ್‌ದಿಲ್ ಶಾ, ಮುಹಮ್ಮದ್ ಅಬ್ಬಾಸ್ ಅಫ್ರಿದಿ, ಮುಹಮ್ಮದ್ ಅಲಿ, ಮುಹಮ್ಮದ್ ಹ್ಯಾರಿಸ್, ಮುಹಮ್ಮದ್ ಇರ್ಫಾನ್ ಖಾನ್, ಒಮೈರ್ ಬಿನ್ ಯೂಸುಫ್, ಶಾಹೀನ್ ಶಾ ಅಫ್ರಿದಿ, ಸೂಫಿಯಾನ್ ಮುಖೀಮ್, ಉಸ್ಮಾನ್ ಖಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.