ADVERTISEMENT

ಬಾಂಗ್ಲಾದೇಶ ವೇಗದ ಬೌಲರ್ ಅಬು ಜಾಯೇದ್‌‌ಗೆ ಕೋವಿಡ್‌–19

ಪಿಟಿಐ
Published 23 ಸೆಪ್ಟೆಂಬರ್ 2020, 14:10 IST
Last Updated 23 ಸೆಪ್ಟೆಂಬರ್ 2020, 14:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಢಾಕಾ: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಅಬು ಜಾಯೇದ್‌‌ ಅವರಲ್ಲಿ ಕೋವಿಡ್‌–19 ಇರುವುದು ದೃಢಪಟ್ಟಿದೆ. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು (ಬಿಸಿಬಿ) ಬುಧವಾರ ಈ ವಿಷಯ ತಿಳಿಸಿದೆ.

‘ವೇಗದ ಬೌಲರ್‌ ಅಬು ಜಾಯೇದ್‌ ಚೌಧುರಿ ರಾಹಿ ಅವರಲ್ಲಿ ಕೋವಿಡ್‌ ಪತ್ತೆಯಾಗಿದೆ. ಸದ್ಯ ಅವರು ಪ್ರತ್ಯೇಕವಾಸದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಗಸೂಚಿಗಳ ಅನ್ವಯ ಮತ್ತಷ್ಟು ತಪಾಸಣೆಗೆ ಒಳಗಾಗಲಿದ್ದಾರೆ‘ ಎಂದು ಬಿಸಿಬಿಯ ಫಿಜಿಸಿಯನ್‌ ದೇಬಶಿಸ್‌ ಚೌಧುರಿ ಹೇಳಿದ್ದಾರೆ.

'27 ಕ್ರಿಕೆಟಿಗರ ಕೋವಿಡ್‌ ಪರೀಕ್ಷೆ ನಡೆಸಿದ್ದು, ಜಾಯೇದ್‌ ಅವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ‘ ಎಂದು ಮಂಡಳಿ ಹೇಳಿದೆ.

ADVERTISEMENT

ಬಾಂಗ್ಲಾ ಪರ 9 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಾಯೇದ್‌ ಅವರು 24 ವಿಕೆಟ್‌ ಗಳಿಸಿದ್ದಾರೆ. ಅಕ್ಟೋಬರ್‌ 23ರಿಂದ ಬಾಂಗ್ಲಾದೇಶ ತಂಡವು ಮೂರು ಟೆಸ್ಟ್‌ಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿದೆ.

ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸೈಫ್ ಹಸನ್‌ ಅವರಿಗೂ ಸೆಪ್ಟೆಂಬರ್‌ 9ರಂದು ಕೋವಿಡ್‌ ತಗುಲಿತ್ತು. ಆ ಬಳಿಕ ಅವರು ಚೇತರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.