ADVERTISEMENT

ODI Cricket: ಬಾಂಗ್ಲಾ ಕ್ರಿಕೆಟಿಗ ಮುಷ್ಫಿಕುರ್‌ ರಹೀಂ ವಿದಾಯ

ಪಿಟಿಐ
Published 6 ಮಾರ್ಚ್ 2025, 12:42 IST
Last Updated 6 ಮಾರ್ಚ್ 2025, 12:42 IST
<div class="paragraphs"><p>ಮುಷ್ಫಿಕುರ್‌ ರಹೀಂ</p></div>

ಮುಷ್ಫಿಕುರ್‌ ರಹೀಂ

   

-ಪಿಟಿಐ ಚಿತ್ರ

ಢಾಕಾ: ಬಾಂಗ್ಲಾದೇಶದ ಅನುಭವಿ ವಿಕೆಟ್‌ ಕೀಪರ್–ಬ್ಯಾಟರ್‌ ಮುಷ್ಫಿಕುರ್ ರಹೀಂ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ADVERTISEMENT

37 ವರ್ಷ ವಯಸ್ಸಿನ ರಹೀಂ ಹಾಲಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಿದ್ದ ಬಾಂಗ್ಲಾದೇಶ ತಂಡದಲ್ಲಿ ಆಡಿದ್ದರು. ತಂಡವು ಗುಂಪುಹಂತದಲ್ಲಿ ಹೊರಬಿದ್ದಿತ್ತು.

‘ಏಕದಿನ ಮಾದರಿಗೆ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ತಂಡದ ಸಾಧನೆ ಸೀಮಿತವಾಗಿರಬಹುದು. ಒಂದಂತೂ ಖಚಿತ. ನಾನು ದೇಶದ ಪರವಾಗಿ ಕಣಕ್ಕೆ ಇಳಿಯುತ್ತಿದ್ದಾಗ ಎಷ್ಟು ಸಾಧ್ಯವೊ ಅಷ್ಟು ಉತ್ತಮವಾಗಿ ಆಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ರಹೀಂ ಸುಮಾರು 20 ವರ್ಷಗಳ ಹಿಂದೆ ತಂಡಕ್ಕೆ ಪದಾರ್ಪಣೆ ಮಾಡಿದ್ದು, 274 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 36.42 ಸರಾಸರಿಯಲ್ಲಿ 7795 ರನ್ ಗಳಿಸಿದ್ದಾರೆ. ಬಾಂಗ್ಲಾ ಪರ ತಮೀಮ್ ಇಕ್ಬಾಲ್ (8357) ಮಾತ್ರ ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಅವರು 94 ಟೆಸ್ಟ್ ಪಂದ್ಯಗಳನ್ನು ಮತ್ತು 102 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಟಿ20 ಮಾದರಿಗೆ ಅವರು ಈ ಮೊದಲೇ ವಿದಾಯ ಹೇಳಿದ್ದಾರೆ.

ಟೆಸ್ಟ್‌ನಲ್ಲಿ 100 ಪಂದ್ಯಗಳನ್ನು ಆಡಿದ ಬಾಂಗ್ಲಾದೇಶ ತಂಡದ ಏಕೈಕ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾಗುವ ಹಾದಿಯಲ್ಲಿದ್ದಾರೆ. 94 ಟೆಸ್ಟ್‌ಗಳಲ್ಲಿ ಅವರು ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.