ADVERTISEMENT

ಕೊರೊನಾ ಲಕ್ಷಣ ಪತ್ತೆಗೆ ಬಿಸಿಬಿ ಆ್ಯಪ್

ಪಿಟಿಐ
Published 26 ಜೂನ್ 2020, 5:52 IST
Last Updated 26 ಜೂನ್ 2020, 5:52 IST
ಮಷ್ರಫೆ ಮೊರ್ತಜಾ
ಮಷ್ರಫೆ ಮೊರ್ತಜಾ   

ಢಾಕಾ: ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳನ್ನು ಪತ್ತೆ ಹಚ್ಚಲು ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ (ಬಿಸಿಬಿ)ಯು ತನ್ನ ಕ್ರಿಕೆಟಿಗರಿಗಾಗಿ ಮೊಬೈಲ್ ಆ್ಯಪ್‌ ಸಿದ್ಧಪಡಿಸಿದೆ.

ಬಾಂಗ್ಲಾ ತಂಡದ ಮಾಜಿ ನಾಯಕ ಮಷ್ರಫೆ ಮೊರ್ತಜಾ, ನಜ್ಮುಲ್ ಇಸ್ಲಾಂ ಮತ್ತು ನಫೀಸ್ ಇಕ್ಬಾಲ್ ಅವರಿಗೆ ಕೋವಿಡ್–19 ಸೋಂಕು ಇರುವುದು ಈಚೆಗೆ ಪತ್ತೆಯಾಗಿತ್ತು. ಆದ್ದರಿಂದ ಬಿಸಿಬಿಯು ‘ಕೋವಿಡ್ –19 ವೆಲ್‌ ಬೀಯಿಂಗ್ ಆ್ಯಪ್’ ಆರಂಭಿಸಿದೆ.

‘ಈ ಆ್ಯಪ್ ಮೂಲಕ ಆಟಗಾರರು ತಮ್ಮ ದೈಹಿಕ ಕ್ಷಮತೆ ಮತ್ತು ಆರೋಗ್ಯದ ಮಾಹಿತಿಗಳನ್ನು ದಾಖಲಿಸಿಟ್ಟುಕೊಳ್ಳಬಹುದು’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಾಹಕ ನಿಜಾಮುದ್ದೀನ್ ಚೌಧರಿ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ.

ADVERTISEMENT

ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಚಾಲನೆ ನೀಡುವಂತೆ 70 ಆಟಗಾರರಿಗೆ ಸೂಚಿಸಲಾಗಿದೆ.

‘ಆಟಗಾರರೆಲ್ಲರನ್ನೂ ಒಂದೇ ಸೂರಿನಡಿ ತರುವುದು ಈ ಆ್ಯಪ್ ಉದ್ದೇಶ. ಇದರಿಂದಾಗಿ ಅವರೆಲ್ಲರ ಆರೋಗ್ಯದ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ. ಆರಂಭದಲ್ಲಿ ಮಂಡಳಿಯೊಂದಿಗೆ ಒಪ್ಪಂದ ಇರುವ ಆಟಗಾರರಿಗೆ ಆ್ಯಪ್ ನೀಡಲಾಗಿದೆ. ಅದರಲ್ಲಿ ಪುರುಷ, ಮಹಿಳೆ ಮತ್ತು 19 ವರ್ಷದೊಳಗಿನವರ ತಂಡದ ಆಟಗಾರರಿದ್ದಾರೆ. ನಂತರ ಮತ್ತಷ್ಟು ಆಟಗಾರರನ್ನು ಸೇರ್ಪಡೆ ಮಾಡಲಾಗುವದು’ ಎಂದು ತಿಳಿಸಿದ್ದಾರೆ.

‘ರಾಷ್ಟ್ರೀಯ ತಂಡದಲ್ಲಿ 30–35 ಆಟಗಾರರು ಬಹಳ ಪ್ರತಿಭಾವಂತರು ಇದ್ದಾರೆ. ಅವರ ಮೇಲೆ ಅಪಾರ ಭರವಸೆ ಇದೆ. 19 ವರ್ಷದೊಳಗಿನ ವಿಶ್ವಕಪ್ ವಿಜೇತ ತಂಡದ ಆಟಗಾರರೂ ಇದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.