ADVERTISEMENT

ವರ್ಣಭೇದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಅಗತ್ಯ

ವೆಸ್ಟ್‌ ಇಂಡೀಸ್‌ ತಂಡದ ಕ್ರಿಕೆಟಿಗ ಬ್ರಾಥ್‌ವೇಟ್‌ ಹೇಳಿಕೆ

ರಾಯಿಟರ್ಸ್
Published 3 ಜುಲೈ 2020, 11:51 IST
Last Updated 3 ಜುಲೈ 2020, 11:51 IST
ಕಾರ್ಲೊಸ್‌ ಬ್ರಾಥ್‌ವೇಟ್
ಕಾರ್ಲೊಸ್‌ ಬ್ರಾಥ್‌ವೇಟ್   

ಲಂಡನ್‌: ‘ವರ್ಣಭೇದ ನೀತಿಯು ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿದೆ. ಈ ಪಿಡುಗನ್ನು ತೊಡೆದು ಹಾಕಲುಕಠಿಣ ಕಾನೂನಿನ ಅಗತ್ಯವಿದೆ’ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಕಾರ್ಲೊಸ್‌ ಬ್ರಾಥ್‌ವೇಟ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆಆಫ್ರೊ–ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಅವರು ಶ್ವೇತ ವರ್ಣೀಯ ಪೊಲೀಸರ ಕ್ರೌರ್ಯಕ್ಕೆ ಬಲಿಯಾಗಿದ್ದರು. ಇದು ಅಮೆರಿಕದಾದ್ಯಂತ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಫ್ಲಾಯ್ಡ್‌ ಸಾವನ್ನು ಖಂಡಿಸಿ ವಿಶ್ವದಾದ್ಯಂತ ‘ಬ್ಲಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಹಲವು ಕ್ರೀಡಾ ತಾರೆಯರೂ ಬೆಂಬಲ ಸೂಚಿಸಿದ್ದಾರೆ.

‘ಕಪ್ಪು ಬ್ಯಾಡ್ಜ್‌ ಅಥವಾ ತೋಳಿಗೆ ಕಪ್ಪು ಪಟ್ಟಿ ಧರಿಸಿಬಿಟ್ಟರೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕಾನೂನಿನಲ್ಲಿ ಮಹತ್ವದ ಬದಲಾವಣೆಯಾಗಬೇಕು. ಆಗ ಮಾತ್ರ ವರ್ಣ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

ADVERTISEMENT

ಇದೇ ತಿಂಗಳ ಎಂಟರಿಂದ 12ರವರೆಗೆ ಸೌತಾಂಪ್ಟನ್‌ನಲ್ಲಿ ನಡೆಯುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ‘ಬ್ಲಾಕ್‌ ಲೈವ್ಸ್‌ ಮ್ಯಾಟರ್‌’ ಲೋಗೊ ಧರಿಸಿ ಆಡಲು ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು ನಿರ್ಧರಿಸಿದ್ದಾರೆ.

ಉದ್ದೀಪನಾ ಮದ್ದು ಸೇವನೆ ಮತ್ತು ಮ್ಯಾಚ್‌ ಫಿಕ್ಸಿಂಗ್‌ ರೀತಿಯಲ್ಲಿ ವರ್ಣ ತಾರತಮ್ಯವನ್ನೂ ಗಂಭೀರ ಅಪರಾಧವಾಗಿ ಪರಿಗಣಿಸಬೇಕು ಎಂದು ವಿಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.