ADVERTISEMENT

ICC Test Rankings: ಅಶ್ವಿನ್ ದಾಖಲೆ ಸರಿಗಟ್ಟಿದ ಬೂಮ್ರಾ

ಪಿಟಿಐ
Published 25 ಡಿಸೆಂಬರ್ 2024, 11:03 IST
Last Updated 25 ಡಿಸೆಂಬರ್ 2024, 11:03 IST
<div class="paragraphs"><p>ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ</p></div>

ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ

   

(ಪಿಟಿಐ, ಬಿಸಿಸಿಐ ಚಿತ್ರ)

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್‌ಗಳ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಬಲಗೈ ವೇಗಿ ಜಸ್‌ಪ್ರೀತ್ ಬೂಮ್ರಾ, ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ADVERTISEMENT

ಅಲ್ಲದೆ ಐಸಿಸಿ ರ‍್ಯಾಂಕಿಂಗ್‌‌ನಲ್ಲಿ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಗಳಿಸಿದ ಭಾರತೀಯ ಬೌಲರ್‌ಗಳ ಪೈಕಿ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಐದರ ಗೊಂಚಲು ಸೇರಿದಂತೆ ಒಟ್ಟು ಒಂಬತ್ತು ವಿಕೆಟ್ ಗಳಿಸಿದ್ದ ಬೂಮ್ರಾ, ಒಟ್ಟು 904 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.

ಭಾರತೀಯ ಬೌಲರ್‌ಗಳ ಪೈಕಿ ಈಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್, 2016ರ ಡಿಸೆಂಬರ್‌ನಲ್ಲಿ ಇದೇ ಸಾಧನೆ ಮಾಡಿದ್ದರು.

ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (856) ಅವರಿಗಿಂತ ಬೂಮ್ರಾ ತಮ್ಮ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮೂರನೇ (852) ಸ್ಥಾನದಲ್ಲಿದ್ದಾರೆ.

ಅಗ್ರ 10ರ ಪಟ್ಟಿಯಲ್ಲಿ ರವೀಂದ್ರ ಜಡೇಜ ನಾಲ್ಕು ಸ್ಥಾನಗಳ ಇಳಿಕೆ ಕಂಡಿದ್ದಾರೆ.

ಬ್ಯಾಟರ್‌ಗಳ ವಿಭಾಗದಲ್ಲಿ ಇಂಗ್ಲೆಂಡ್‌ನ ಜೋ ರೂಟ್ (895) ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನವರೇ ಆದ ಹ್ಯಾರಿ ಬ್ರೂಕ್ ಎರಡು (876) ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮೂರನೇ (867) ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಒಂದು ಸ್ಥಾನ ಮುಂಬಡ್ತಿ ಪಡೆದು ನಾಲ್ಕನೇ ಸ್ಥಾನಕ್ಕೆ (825) ತಲುಪಿದ್ದಾರೆ. ಸ್ಟೀವ್ ಸ್ಮಿತ್ ಸಹ ಅಗ್ರ 10ರ ಪಟ್ಟಿಗೆ ಮರಳಿದ್ದಾರೆ.

ಭಾರತದ ಯಶಸ್ವಿ ಜೈಸ್ವಾಲ್ ಒಂದು ಸ್ಥಾನ ಇಳಿಕೆ ಕಂಡು ಐದನೇ ಸ್ಥಾನಕ್ಕೆ (805) ತಲುಪಿದ್ದಾರೆ. ರಿಷಭ್ ಪಂತ್ 11ಕ್ಕೆ ಹಾಗೂ ಶುಭಮನ್ ಗಿಲ್ 20ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಅಗ್ರಸ್ಥಾನ (424) ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.