ADVERTISEMENT

ಶೂನ್ಯಕ್ಕೆ ಔಟಾದ ಬ್ಯಾಂಕ್ರಾಫ್ಟ್‌

ಏಜೆನ್ಸೀಸ್
Published 30 ಡಿಸೆಂಬರ್ 2018, 19:18 IST
Last Updated 30 ಡಿಸೆಂಬರ್ 2018, 19:18 IST
ಕ್ಯಾಮರಾನ್ ಬ್ಯಾಂಕ್ರಾಫ್ಟ್‌
ಕ್ಯಾಮರಾನ್ ಬ್ಯಾಂಕ್ರಾಫ್ಟ್‌   

ಮೆಲ್ಬರ್ನ್‌: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಶಿಕ್ಷೆ ಮುಗಿದ ನಂತರ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಬಿಗ್‌ಬ್ಯಾಷ್‌ ಲೀಗ್‌ನ ಪಂದ್ಯದಲ್ಲಿ ಪರ್ತ್‌ ಸ್ಕಾರ್ಚರ್ಸ್‌ ತಂಡದ ಪರವಾಗಿ
ಕಣಕ್ಕೆ ಇಳಿದ ಅವರು ಎದುರಿಸಿದ ಮೂರನೇ ಎಸೆತದಲ್ಲೇ ಔಟಾಗಿ ಮರಳಿದರು.

ಹೋಬರ್ಟ್ ಹರಿಕೇನ್ಸ್‌ ಎದುರಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಅವರು ಕ್ರೀಸ್‌ಗೆ ಬಂದಿದ್ದರು. ಆಗ ಸ್ಕಾರ್ಚರ್ಸ್ ತಂಡದ ಮೊತ್ತ 3ಕ್ಕೆ 16 ಆಗಿತ್ತು. ಮೊದಲ ಎಸೆತ ಬ್ಯಾಂಕ್ರಾಫ್ಟ್ ಅವರ ಪ್ಯಾಡ್‌ಗೆ ತಗುಲಿ ಸ್ಕ್ವೇರ್ಲೆಗ್ ಕಡೆಗೆ ಸಾಗಿತು. ನಂತರದ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದರು. ಮೂರನೇ ಎಸೆತ ಬ್ಯಾಟಿನ ಅಂಚಿಗೆ ಸೋಕಿ ಹಿಂದೆ ಚಿಮ್ಮಿತು. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್‌ ಕ್ಯಾಚ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT