ADVERTISEMENT

ಟಿ20 ವಿಶ್ವಕಪ್‌ಗೆ ಕೆನಡಾಗೆ ಅರ್ಹತೆ ಸೇರಿ ಚಿಟಿಕೆ ಸುದ್ದಿಗಳು ಇಲ್ಲಿವೆ..

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:19 IST
Last Updated 22 ಜೂನ್ 2025, 14:19 IST
ಜೋಫ್ರಾ ಆರ್ಚರ್‌
ಜೋಫ್ರಾ ಆರ್ಚರ್‌   

ಟಿ20 ವಿಶ್ವಕಪ್‌: ಕೆನಡಾಗೆ ಅರ್ಹತೆ

ಕೆನಡಾ ದೇಶದ ಪುರುಷರ ಕ್ರಿಕೆಟ್ ತಂಡವು ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಿದೆ. ವಿಶ್ವಕಪ್ ಟೂರ್ನಿಯು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. 

ಅಮೆರಿಕಾ ಕ್ವಾಲಿಫೈಯರ್‌ ಸುತ್ತಿನಲ್ಲಿ ಬಹಾಮಾಸ್ ತಂಡದ ಎದುರು 7 ವಿಕೆಟ್‌ಗಳಿಂದ ಜಯಿಸಿದ ಕೆನಡಾ  ಅರ್ಹತೆ ಗಿಟ್ಟಿಸಿತು. ಈ ಸುತ್ತಿನಲ್ಲಿ ಕೆನಡಾ ಗೆದ್ದ ಸತತ ಐದನೇ ಪಂದ್ಯ ಇದಾಗಿದೆ. ಹೋದ ವರ್ಷದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೆನಡಾ ತಂಡವು ಆಡಿತ್ತು. 

ADVERTISEMENT

ಕೌಂಟಿ ಆಡಲಿರುವ ಆರ್ಚರ್ 

ಹೆಬ್ಬೆರಳಿನ ಗಾಯದಿಂದ ಚೇತರಿಸಿಕೊಂಡಿರುವ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇದು ಅವರಿಗೆ ಫಿಟ್‌ನೆಸ್ ಪರೀಕ್ಷೆಯೂ ಆಗಲಿದೆ. 

ಜುಲೈ 2ರಂದು ಆರಂಭವಾಗುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ನಲ್ಲಿಅವರು  ಕಣಕ್ಕಿಳಿಯುವ ಸಾಧ್ಯತೆ ಇದೆ. ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಆರ್ಚರ್ ಮತ್ತು ಮಾರ್ಕ್ ವುಡ್ ಅವರು ಕಣಕ್ಕಿಳಿದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.