ADVERTISEMENT

ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ–ಬಾಂಗ್ಲಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2025, 9:17 IST
Last Updated 27 ಫೆಬ್ರುವರಿ 2025, 9:17 IST
<div class="paragraphs"><p>ಪಾಕಿಸ್ತಾನ–ಬಾಂಗ್ಲಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ</p></div>

ಪಾಕಿಸ್ತಾನ–ಬಾಂಗ್ಲಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ

   

ರಾವಲ್ಪಿಂಡಿ: ಈಗಾಗಲೇ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಾದಿಯಿಂದ ಹೊರಬಿದ್ದಿರುವ ಆತಿಥೇಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಗುರುವಾರ ಆಡಲಿದ್ದ ಪಂದ್ಯವು ಮಳೆಯಿಂದಾಗಿ ರದ್ದಾಯಿತು. 

29 ವರ್ಷಗಳ ನಂತರ ಪಾಕಿಸ್ತಾನವು ಐಸಿಸಿ ಟ್ರೋಫಿ ಟೂರ್ನಿಯನ್ನು ಆಯೋಜಿಸಿದೆ. ಆದರೆ ಎ ಗುಂಪು ಹಂತದಲ್ಲಿ ಒಂದೇ ಒಂದು ಪಂದ್ಯವನ್ನೂ ಜಯಿಸದೇ ಹೊರಬಿದ್ದಿತು. ಮೊದಲೆರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ಭಾರತದ ಎದುರು ಸೋತಾಗಲೇ ಮೊಹಮ್ಮದ್ ರಿಜ್ವಾನ್ ನಾಯಕತ್ವದ ಪಾಕ್ ಹೊರಬಿದ್ದಿತ್ತು. ಬಾಂಗ್ಲಾ ಎದುರು ಸಮಾಧಾನಕ ಜಯಗಳಿಸುವ ಯೋಚನೆಯಲ್ಲಿತ್ತು. ಆದರೆ ಅದಕ್ಕೆ ಮಳೆ ಆಸ್ಪದ ಕೊಡಲಿಲ್ಲ. ಬಾಂಗ್ಲಾ ಕೂಡ ಕಳೆದ ಎರಡೂ ಪಂದ್ಯಗಳಲ್ಲಿ ಸೋತಿತ್ತು. 

ADVERTISEMENT

ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ತವರಿನಲ್ಲಿಯೇ  ಹೀನಾಯ ಸೋಲು ಅನುಭವಿಸಿದ ಪಾಕ್ ತಂಡವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಹಾಪೂರವೇ ಹರಿಯುತ್ತಿದೆ. 

ಈ ಟೂರ್ನಿಯಲ್ಲಿ ಮಳೆಯಿಂದಾಗಿ ರದ್ದಾಗಿರುವ ಎರಡನೇ ಪಂದ್ಯ ಇದಾಗಿದೆ. ರಾವಲ್ಪಿಂಡಿಯಲ್ಲಿಯೇ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ಪಂದ್ಯವೂ  ಈಚೆಗೆ ರದ್ಧಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.