ADVERTISEMENT

ಮೇಲ್ಮನವಿ ಸಲ್ಲಿಸಿದ ಚಾಂಡಿಮಲ್‌

ಪಿಟಿಐ
Published 21 ಜೂನ್ 2018, 18:14 IST
Last Updated 21 ಜೂನ್ 2018, 18:14 IST
ದಿನೇಶ್‌ ಚಾಂಡಿಮಲ್‌
ದಿನೇಶ್‌ ಚಾಂಡಿಮಲ್‌   

ಗ್ರಾಸ್‌ ಐಲೆಟ್‌, ಸೇಂಟ್‌ ಲೂಸಿಯಾ: ಶ್ರೀಲಂಕಾ ತಂಡದ ನಾಯಕ ದಿನೇಶ್‌ ಚಾಂಡಿಮಲ್‌, ಪಂದ್ಯದ ರೆಫರಿ ಜಾವಗಲ್‌ ಶ್ರೀನಾಥ್ ಹೇರಿರುವ ಒಂದು ಪಂದ್ಯದ ನಿಷೇಧ ಶಿಕ್ಷೆಯನ್ನು ಪ್ರಶ್ನಿಸಿ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ (ಐಸಿಸಿ) ಮೇಲ್ಮನವಿ ಸಲ್ಲಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಚಾಂಡಿಮಲ್‌, ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಶ್ರೀನಾಥ್‌, ಚಾಂಡಿಮಲ್‌ ಮೇಲಿನ ಆರೋಪ ಸಾಬೀತಾದ ಕಾರಣ ಒಂದು ಪಂದ್ಯ ನಿಷೇಧ ಹೇರಿದ್ದರು.

‘ಚಾಂಡಿಮಲ್‌ ಅವರು ಪಂದ್ಯದ ವೇಳೆ ಚೆಂಡಿನ ಮೇಲೆ ಸಿಹಿ ಮಿಂಟನ್ನು (ಸಲಿವಾ) ಹಚ್ಚಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರು ಐಸಿಸಿ ನಿಯಮ ಉಲ್ಲಂಘಿಸಿರುವ ಕಾರಣ ಕಠಿಣ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿಚಾರಣೆಯ ನಂತರ ಶ್ರೀನಾಥ್‌ ಹೇಳಿದ್ದರು. ಆದರೆ ಚಾಂಡಿಮಲ್‌, ನಾನು ಯಾವ ತಪ್ಪನ್ನೂ ಮಾಡಿಲ್ಲ. ನನ್ನ ಮೇಲೆ ಶಿಕ್ಷೆ ವಿಧಿಸಿದ್ದು ಸರಿಯಲ್ಲ ಎಂದಿದ್ದರು.

ADVERTISEMENT

‘ಪಂದ್ಯದ ರೆಫರಿ ಶ್ರೀನಾಥ್‌ ಹೇರಿರುವ ನಿಷೇಧವನ್ನು ಪ್ರಶ್ನಿಸಿ ಚಾಂಡಿಮಲ್‌ ಅವರು ಮೇಲ್ಮನವಿ ಸಲ್ಲಿಸಿದ್ದಾರೆ’ ಎಂದು ಐಸಿಸಿ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.