ADVERTISEMENT

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್, ಫಫ್ ಡುಪ್ಲೆಸಿ

ಪಿಟಿಐ
Published 10 ನವೆಂಬರ್ 2021, 14:01 IST
Last Updated 10 ನವೆಂಬರ್ 2021, 14:01 IST
ಫಫ್ ಡುಪ್ಲೆಸಿ
ಫಫ್ ಡುಪ್ಲೆಸಿ   

ಕೊಲಂಬೊ: ಸ್ಪೋಟಕ ಶೈಲಿಯ ಬ್ಯಾಟ್ಸ್‌ಮನ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಫ್ ಡುಪ್ಲೆಸಿ ಲಂಕಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಆಯ್ಕೆಯಾಗಿದ್ದಾರೆ.

ಟೂರ್ನಿಯಲ್ಲಿ ಐದು ಫ್ರ್ಯಾಂಚೈಸಿಗಳು ಆಡಲಿವೆ. ಡಿಸೆಂಬರ್ 5ರಿಂದ ಟೂರ್ನಿ ಆರಂಭವಾಗಲಿವೆ. ಕೊಲಂಬೊ ಸ್ಟಾರ್ಸ್, ದಂಬುಲಾ ಜೈಂಟ್ಸ್‌, ಗಾಲ್ ಗ್ಲೇಡಿಯೇಟರ್ಸ್, ಜಾಫ್ನಾ ಕಿಂಗ್ಸ್ ಮತ್ತು ಕ್ಯಾಂಡಿ ವಾರಿಯರ್ಸ್ ತಂಡಗಳು ಸೆಣಸಲಿವೆ.

ಕ್ರಿಸ್ ಗೇಲ್ ಕೊಲಂಬೊ ಸ್ಟಾರ್ಸ್‌ ತಂಡದಲ್ಲಿ ಮತ್ತು ಡುಪ್ಲೆಸಿ ಜಾಫ್ನಾ ಕಿಂಗ್ಸ್‌ನಲ್ಲಿ ಆಡುವರು. ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಇಮ್ರಾನ್ ತಾಹೀರ್ ದಂಬುಲಾ ಜೈಂಟ್ಸ್ ತಂಡದಲ್ಲಿ ಆಡಲಿದ್ದಾರೆ.

ADVERTISEMENT

ಪ್ಲೇಯರ್ ಡ್ರಾಫ್ಟ್‌ ಪ್ರಕ್ರಿಯೆಯಯ್ಲಲಿ ಒಟ್ಟು ಆರು ಆಟಗಾರರಿದ್ದರು. ಅದರಲ್ಲಿ ಮೂನ್ನೂರು ಮಂದಿ ಶ್ರೀಲಂಕಾ ಮತ್ತು ಇನ್ನುಳಿದವರು ವಿದೇಶಿ ತಂಡಗಳ ಆಟಗಾರರಾಗಿದ್ದಾರೆ.

’ಎಲ್‌ಪಿಎಲ್‌ನಲ್ಲಿ ತಾರಾವರ್ಚಸ್ಸಿನ ಹಲವು ಆಟಗಾರರು ಆಡುತ್ತಿದ್ದಾರೆ. ಇದು ಸಂತಸದ ವಿಷಯ‘ ಎಂದು ಟೂರ್ನಿಯ ಅಧಿಕೃತ ಪ್ರಮೋಟರ್, ದುಬೈ ಮೂಲದ ಐಪಿಜಿಯ ಸಂಸ್ಥಾಪಕ–ಸಿಇಒ ಅನಿಲ್ ಮೋಹನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.