ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ನಡುವೆ ಈಗ ರೋಚಕ ಪೈಪೋಟಿ ನಡೆಯುತ್ತಿದೆ.
ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸ್ಥಾನಕ್ಕೆ ಲಗ್ಗೆ ಹಾಕುವ ಹಣಾಹಣಿ ಅದು. ಈ ಪಟ್ಟಿಯಲ್ಲಿ ಒಂದು ತಿಂಗಳ ಹಿಂದೆ ಅಗ್ರಸ್ಥಾನಕ್ಕೆ ಏರಿದ್ದ ರೋಹಿತ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಕೊಹ್ಲಿ ಒಂದು ರನ್ ಅಂತರದಿಂದ ಹಿಂದಿಕ್ಕಿದ್ದರು.
ಆದ್ದರಿಂದ ಬುಧವಾರದ ಪಂದ್ಯದ ಮುಕ್ತಾಯದ ಹೊತ್ತಿಗೆ ಈ ಪಟ್ಟಿಯಲ್ಲಿ ವಿರಾಟ್ ಅಥವಾ ರೋಹಿತ್ ಅವರಲ್ಲಿ ಯಾರು ಅಗ್ರಸ್ಥಾನದಲ್ಲಿರುತ್ತಾರೆಂದು ಕಾದು ನೋಡಬೇಕು. ವಿರಾಟ್ 69 ಪಂದ್ಯಗಳಿಂದ 2563 ರನ್ ಗಳಿಸಿದ್ದಾರೆ. ರೋಹಿತ್ 95 ಪಂದ್ಯಗಳನ್ನು ಆಡಿ 2562 ರನ್ ಪೇರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.