ADVERTISEMENT

ಕೂಚ್‌ ಬಿಹಾರ್ ಟ್ರೋಫಿ: ಆಂಧ್ರ– ಕರ್ನಾಟಕ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 18:45 IST
Last Updated 4 ಡಿಸೆಂಬರ್ 2025, 18:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕರ್ನಾಟಕ ತಂಡದ ಧ್ಯಾನ್ ಎಂ. ಹಿರೇಮಠ ಅವರು ಅನಂತಪುರದಲ್ಲಿ ನಡೆದ ಬಿಸಿಸಿಐ ಕೂಚ್‌ ಬಿಹಾರ್ ಟ್ರೋಫಿಯ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳ ಗೊಂಚಲು ಪಡೆದರು. ಆಂಧ್ರ ವಿರುದ್ಧದ ಈ ಪಂದ್ಯವು ಗುರುವಾರ ಡ್ರಾನಲ್ಲಿ ಮುಕ್ತಾಯವಾಯಿತು.

ಮೊದಲ ಇನಿಂಗ್ಸ್‌ನಲ್ಲಿ 23 ರನ್‌ಗಳ ಅಲ್ಪ ಮುನ್ನಡೆ ಪಡೆದ ಆಂಧ್ರ ತಂಡವು (ಬುಧವಾರ 2 ವಿಕೆಟ್‌ಗೆ 36) 9 ವಿಕೆಟ್‌ಗೆ 179 ರನ್‌ ಗಳಿಸಿ ಡಿಕ್ಲೇರ್ಡ್‌ ಮಾಡಿಕೊಂಡಿತು. ಸಿದ್ಧು ಕಾರ್ತಿಕ್‌ ರೆಡ್ಡಿ ಅಜೇಯ 50 ರನ್‌ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. 

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಪಡೆದಿದ್ದ ಧ್ಯಾನ್‌ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಕಬಳಿಸಿ ಆಂಧ್ರ ಬ್ಯಾಟರ್‌ಗಳನ್ನು ಕಾಡಿದರು. ಗೆಲುವಿಗೆ 203 ಗುರಿ ಪಡೆದ ಕರ್ನಾಟಕ ತಂಡವು ಕೆ ವಿಕೆಟ್‌ ನಷ್ಟವಿಲ್ಲದೆ 36 ರನ್‌ ಗಳಿಸಿ ಪಂದ್ಯ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌:

ಆಂಧ್ರ: 415 ಮತ್ತು 83 ಓವರ್‌ಗಳಲ್ಲಿ 9 ವಿಕೆಟ್‌ಗೆ 179 ಡಿಕ್ಲೇರ್ಡ್‌ (ಆನಂದ್ ಜೋಸಿಯಾ 40, ಸಿದ್ದು ಕಾರ್ತಿಕ್‌ ರೆಡ್ಡಿ ಔಟಾಗದೇ 50, ಎನ್‌.ರಾಜೇಶ್‌ 41; ರಥನ್‌ ಬಿ.ಆರ್. 62ಕ್ಕೆ 2, ಧ್ಯಾನ್‌ ಎಂ. ಹಿರೇಮಠ);

ಕರ್ನಾಟಕ: 392 ಮತ್ತು 15 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 36).

ಫಲಿತಾಂಶ: ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.