
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಗುಜರಾತ್ ತಂಡವು, ಕೂಚ್ ಬಿಹಾರ್ ಟ್ರೋಫಿ ( ಕ್ವಾರ್ಟರ್‌ಫೈನಲ್ ಪಂದ್ಯದ ಮೂರನೇ ದಿನವಾದ ಶನಿವಾರ ಕರ್ನಾಟಕ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿತು.
ವಲ್ಸಾಡ್‌ನ ಸರ್ದಾರ್ ಪಟೇಲ್ ಕ್ರಿಡಾಂಗಣದಲ್ಲಿ ಗುಜರಾತ್ ತಂಡದ 451 ರನ್‌ಗಳಿಗೆ ಉತ್ತರವಾಗಿ ಶುಕ್ರವಾರ 60 ಓವರುಗಳಲ್ಲಿ 3 ವಿಕೆಟ್‌ಗೆ 160 ರನ್ ಗಳಿಸಿದ್ದ ಕರ್ನಾಟಕ ತಂಡವು ಮೂರನೇ ದಿನ 46.2 ಓವರುಗಳಲ್ಲಿ 280 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಆತಿಥೇಯ ತಂಡ 171 ರನ್‌ಗಳ ಮುನ್ನಡೆ ಸಂಪಾದಿಸಿತು.
ಕರ್ನಾಟಕ ಪರ ವರುಣ್ ಪಟೇಲ್ (52, 107ಎ, 4x8) ಅರ್ಧ ಶತಕ ಬಾರಿಸಿದರು. ಗುಜರಾತ್ ಕಡೆ ಆಫ್ ಸ್ಪಿನ್ನರ್ ರುದ್ರ ಪಟೇಲ್ ಮತ್ತು ನಿಹಾಲ್ ಪಟೇಲ್ 6 ವಿಕೆಟ್‌ಗಳನ್ನು ಸಮನಾಗಿ ಹಂಚಿಕೊಂಡರು.
ಎರಡನೇ ಇನಿಂಗ್ಸ್‌ನಲ್ಲಿ ಗುಜರಾತ್ ತಂಡ 41 ಓವರುಗಳಲ್ಲಿ 2 ವಿಕೆಟ್‌ಗೆ 178 ರನ್ ಗಳಿಸಿದ್ದು ಒಟ್ಟಾರೆ 349 ರನ್ ಮುನ್ನಡೆ ಗಿಟ್ಟಿಸಿದೆ. ಆರಂಭ ಆಟಗಾರ ಮಲಯ್ ವಿ ಶಾ (ಬ್ಯಾಟಿಂಗ್ 82, 124ಎ, 14x4) ಮತ್ತು ಪೂರವ್ ಎಂ.ಪೂಜಾರ (ಬ್ಯಾಟಿಂಗ್ 59) ಮುರಿಯದ ಮೂರನೇ ವಿಕೆಟ್‌ಗೆ 126 ರನ್ ಸೇರಿಸಿದ್ದು, ಗುಜರಾತ್ ತಂಡದ ಸೆಮಿಫೈನಲ್ ಹಾದಿ ಉಜ್ವಲಗೊಳಿಸಿದರು.
ಮೊದಲ ಇನಿಂಗ್ಸ್: ಗುಜರಾತ್: 451 ಮತ್ತು 41 ಓವರುಗಳಲ್ಲಿ 2 ವಿಕೆಟ್‌ಗೆ 178 (ಮಲಯ್ ವಿ ಶಾ ಔಟಾಗದೇ 82, ಪುರವ್ ಎಂ.ಪೂಜಾರ ಔಟಾಗದೇ 59); ಕರ್ನಾಟಕ: 106.2 ಓವರುಗಳಲ್ಲಿ 280 (ಧ್ರುವ್ ಕೃಷ್ಣನ್ 82, ಆದೇಶ್ ಡಿ.ಅರಸ್ 39, ಅನ್ವಯ್ ದ್ರಾವಿಡ್ 29, ವರುಣ್ ಪಟೇಲ್ 52, ಕೃಷವ್ ಎಸ್.ಸೋಮಸುಂದರ್ 27; ರುದ್ರ ಪಿ.ಪಟೇಲ್ 92ಕ್ಕೆ3, ಕಾವ್ಯ ವಿ.ಪಟೇಲ್ 33ಕ್ಕೆ2, ನಿಹಾಲ್ ಎಸ್.ಪಟೇಲ್ 20ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.