ADVERTISEMENT

₹ 1 ಲಕ್ಷ ದೇಣಿಗೆ ನೀಡಿ ಟ್ರೋಲ್ ಆದ ಧೋನಿಯ ವಾರ್ಷಿಕ ಆದಾಯ ಎಷ್ಟು ಗೊತ್ತೇ?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 11:01 IST
Last Updated 27 ಮಾರ್ಚ್ 2020, 11:01 IST
   

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸದ್ಯ ಕ್ರಿಕೆಟ್‌ನಿಂದದೂರ ಉಳಿದಿರುವ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

ದೇಶದಾದ್ಯಂತ ಸುಮಾರು 720 ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ಹಾಗೂ ಇದುವರೆಗೆ 17 ಜನರನ್ನು ಬಲಿ ಪಡೆದಿರುವ ಕೋವಿಡ್‌–19 ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಪುಣೆಯಲ್ಲಿರುವ ದಿನಗೂಲಿ ನೌಕರರಿಗೆ ನೆರವಾಗಲು ಧೋನಿ ₹ 1 ಲಕ್ಷ ನೀಡಿದ್ದಾರೆ.

ದೇಶದ ಅತ್ಯಂತ ಶ್ರೀಮಂತ ಕ್ರಿಡಾಪಟುಗಳಲ್ಲಿ ಒಬ್ಬರೆನಿಸಿರುವ ಧೋನಿ ನೀಡಿರುವ ಈ ಹಣವು ಅತ್ಯಂತ ಕಡಿಮೆಯಾಯಿತೆಂದು ಆರೋಪಿಸಿರುವ ನೆಟ್ಟಿಗರು, ಧೋನಿ ಗಳಿಸುವ ವಾರ್ಷಿಕ ಆದಾಯವನ್ನು ಉಲ್ಲೇಖಿಸಿ ಟ್ವಿಟರ್‌ನಲ್ಲಿ ಟ್ರೋಲ್‌ ಮಾಡಿದ್ದಾರೆ.

ADVERTISEMENT

‘ಪುಣೆಯಲ್ಲಿರುವ 100 ಕುಟುಂಬಗಳಿಗೆ 14 ದಿನಗಳವರೆಗೆ ನೆರವಾಗಲು ಧೋನಿ ₹ 1 ಲಕ್ಷ ನೆರವು ನೀಡಿದ್ದಾರೆ. ಅವರ ವಾರ್ಷಿಕ ನಿವ್ವಳ ಆದಾಯ ಅಂದಾಜು ₹ 800 ಕೋಟಿ’ ಎಂದು ಒಬ್ಬರುಕಾಲೆಳೆದಿದ್ದಾರೆ.

ಮತ್ತೊಬ್ಬರು, 'ಧೋನಿ ನಿವ್ವಳ ₹ 800 ಕೋಟಿ. ಆದರೆ, ಅವರು ₹ 1 ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಕೆಲವರು ಹೇಳುವಂತೆ ನೀವು ಹೆಚ್ಚು ಹಣ ಗಳಿಸುತ್ತಾ ಸಾಗಿದಂತೆ, ಮತ್ತಷ್ಟು ಜಿಪುಣರಾಗುತ್ತೀರಿ. ಇದು ಸತ್ಯ’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ₹ 50 ಲಕ್ಷ ದೇಣಿಗೆ ನೀಡಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸಂಕಷ್ಟದಲ್ಲಿರುವವರಿಗಾಗಿ ₹ 50 ಲಕ್ಷ ಮೌಲ್ಯದ ಅಕ್ಕಿ ನೀಡುವುದಾಗಿ ಘೋಷಿಸಿದ್ದಾರೆ.ಅಥ್ಲೀಟ್‌ಗಳಾದ ಭಜರಂಗ್‌ ಪೂನಿಯಾ ಹಾಗೂ ವೇಗದ ಓಟಗಾರ್ತಿ ಹಿಮಾ ದಾಸ್‌ ಅವರು ಮಾಸಿಕ ವೇತನ ನೀಡುವುದಾಗಿ ಹೇಳಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪುಣೆಯ100 ಕುಟುಂಬಗಳಿಗೆ 14 ದಿನಗಳವರೆಗೆ ನೆರವಾಗುವುದಾಗಿ ಘೋಷಿಸಿರುವ ಮುಕುಲ್‌ಮಾಧವ್‌ ಫೌಂಡೇಷನ್‌ಗೆ ಧೋನಿ ₹ 1 ಲಕ್ಷ ದೇಣಿಗೆ ನೀಡಿದ್ದಾರೆ.

ಧೋನಿ ಬಗೆಗಿನಟ್ವೀಟ್‌ಗಳು ಇಲ್ಲಿವೆ ಓದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.