ADVERTISEMENT

ಕೊರೊನಾ: ಗಂಭೀರ್‌ ದೇಣಿಗೆ

ಪಿಟಿಐ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ಗೌತಮ್‌ ಗಂಭೀರ್‌ 
ಗೌತಮ್‌ ಗಂಭೀರ್‌    

ನವದೆಹಲಿ: ಹಿರಿಯ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಕೋವಿಡ್‌ನಿಂದ ಬಳಲುತ್ತಿರುವವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಗಂಭೀರ್‌, ತಮ್ಮ ಎರಡು ವರ್ಷದ ವೇತನವನ್ನು ದೇಣಿಗೆ ನೀಡಿದ್ದಾರೆ.

‘ದೇಶವು ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದು ಬಹಳ ಮುಖ್ಯ. ಸಂಸದನಾಗಿ ನನಗೆ ಸಿಗುವ ಎರಡು ವರ್ಷದ ವೇತನವನ್ನು ಪ್ರಧಾನ ಮಂತ್ರಿಗಳ ‘ಕೇರ್ಸ್’ ನಿಧಿಗೆ ಕೊಟ್ಟಿದ್ದೇನೆ. ನೀವು ಕೂಡ ಕೈಲಾದಷ್ಟು ದೇಣಿಗೆ ನೀಡಿ’ ಎಂದು ಗಂಭೀರ್‌ ಅವರು ಗುರುವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ADVERTISEMENT

ಇದಕ್ಕೂ ಮೊದಲು 38 ವರ್ಷ ವಯಸ್ಸಿನ ಗಂಭೀರ್‌, ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ₹1 ಕೋಟಿ ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.