ADVERTISEMENT

ಆಸ್ಟ್ರೇಲಿಯಕ್ಕೆ ಭಾರಿ ಜಯ

ಪಿಟಿಐ
Published 27 ಫೆಬ್ರುವರಿ 2020, 19:08 IST
Last Updated 27 ಫೆಬ್ರುವರಿ 2020, 19:08 IST

ಕೆನ್‌ಬೆರಾ : ಅಲಿಸಾ ಹೀಲಿ (83, 53 ಎ, 10 ಬೌಂ, 3ಸಿ) ಮತ್ತು ಬೆತ್‌ ಮೂನಿ (ಔಟಾಗದೇ 81, 58 ಎ, 9 ಬೌಂ) ಆಕ್ರಮಣಕಾರಿ ಆಟವಾಡಿ ಅರ್ಧಶತಕಗಳನ್ನು ಬಾರಿಸಿದರು. ಇವರಿಬ್ಬರ ಅಬ್ಬರದ ಆಟದಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟಿ–20 ಮಹಿಳಾ ವಿಶ್ವ ಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಗುರುವಾರ 86 ರನ್‌ಗಳಿಂದ ಬಗ್ಗುಬಡಿಯಿತು.

ಅಲಿಸಾ ಮತ್ತು ಮೂನಿ ಮೊದಲ ವಿಕೆಟ್‌ಗೆ 151 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಆಸ್ಟ್ರೇಲಿಯಾ ನಿಗದಿತ ಓವರುಗಳಲ್ಲಿ 1 ವಿಕೆಟ್‌ಗೆ 189 ರನ್‌ ಹೊಡೆದರೆ, ಬಾಂಗ್ಲಾದೇಶ ತನ್ನ ಪಾಲಿನ ಓವರುಗಳಲ್ಲಿ 9 ವಿಕೆಟ್‌ಗೆ 103 ರನ್‌ ಗಳಿಸಲು ಮಾತ್ರ ಶಕ್ತವಾಯಿತು.

ಸ್ಕೋರುಗಳು: ಆಸ್ಟ್ರೇಲಿಯಾ: 20 ಓವರುಗಳಲ್ಲಿ 1 ವಿಕೆಟ್‌ಗೆ 189 (ಅಲಿಸಾ ಹೀಲಿ 83, ಬೆತ್‌ ಮೂನಿ ಔಟಾಗದೇ 81; ಸಲ್ಮಾ ಖಾತೂನ್‌ 39ಕ್ಕೆ1); ಬಾಂಗ್ಲಾದೇಶ: 20 ಓವರುಗಳಲ್ಲಿ 9 ವಿಕೆಟ್‌ಗೆ 103 (ಫರ್ಗಣ ಹಕ್‌ ಪಿಂಕಿ 36; ಮೇಗನ್‌ ಶುಟ್‌ 21ಕ್ಕೆ3, ಜೆಸ್‌ ಜೊನಾಸೆನ್‌ 17ಕ್ಕೆ2).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.