ADVERTISEMENT

ಆಫ್ರಿಕಾ ಪಡೆಗೆ ಭಾರತ ಪೆಟ್ಟು: ಇನಿಂಗ್ಸ್ ಮುನ್ನಡೆಯತ್ತ ವಿರಾಟ್ ಪಡೆ

ಟೆಸ್ಟ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 6:25 IST
Last Updated 21 ಅಕ್ಟೋಬರ್ 2019, 6:25 IST
   

ರಾಂಚಿ: ಮೂರು ಪ‍ಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ ಬೌಲರ್‌ಗಳು ಮೂರನೇ ಪಂದ್ಯದಲ್ಲಿಯೂ ಪೆಟ್ಟು ನೀಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 127ರನ್‌ ಗಳಿಗೆ 6 ವಿಕೆಟ್‌ ಕೆಳೆದುಕೊಂಡಿರುವ ಫಾಫ್‌ ಡು ಪ್ಲೆಸಿ ಬಳಗಹಿನ್ನಡೆಯತ್ತ ಮುಖಮಾಡಿದೆ.

ಇಲ್ಲಿನಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ9 ವಿಕೆಟ್‌ ನಷ್ಟಕ್ಕೆ 497 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ್ದ ಆಫ್ರಿಕಾ ಪಡೆ ಕೇವಲ 16 ರನ್‌ ಆಗುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ADVERTISEMENT

ಮಂದ ಬೆಳಕಿನ ಕಾರಣ ಎರಡನೇ ದಿನದಾಟವನ್ನು ಬೇಗನೆ ನಿಲ್ಲಿಸಿದಾಗ ಹಮ್ಜಾ ಜೊತೆ ನಾಯಕ ಪ್ಲೆಸಿ ಕ್ರೀಸ್‌ನಲ್ಲಿದ್ದರು. ಮೂರನೇ ದಿನದಾಟದ ಆರಂಭದಲ್ಲೇಪ್ಲೆಸಿ ವಿಕೆಟ್ ಪಡೆದ ಉಮೇಶ್‌ ಯಾದವ್‌ ವಿರಾಟ್‌ ಪಡೆಗೆ ಮೇಲುಗೈ ತಂದಿತ್ತರು. ಈ ವೇಳೆ ಹಮ್ಜಾಗೆ ಜೊತೆಯಾದ,ಬವುಮಾ ಎಚ್ಚರಿಕೆಯ ಆಟ ಆಡಿ, ಆತಿಥೇಯ ಬೌಲರ್‌ಗಳ ವಿಕೆಟ್‌ ದಾಹಕ್ಕೆ ತಡೆಯೊಡ್ಡಿದ್ದರು.ನಾಲ್ಕನೇ ವಿಕೆಟ್‌ಗೆ 91ರನ್‌ಗಳ ಜೊತೆಯಾಟವಾಡಿ, ತಮ್ಮ ತಂಡವನ್ನು ಶತಕದ ಗಡಿದಾಟಿಸಿದ್ದ ಈ ಜೋಡಿಯನ್ನು ಆಲ್ರೌಂಡರ್‌ ರವೀಂದ್ರ ಜಡೇಜಾ ಬೇರ್ಪಡಿಸಿದರು.

79 ಎಸೆತಗಳಲ್ಲಿ 62 ರನ್‌ ಗಳಿಸಿದ್ದಹಮ್ಜಾ, ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ನಂತರದ ಓವರ್‌ನಲ್ಲಿಶಹಬಾದ್‌ ನದೀಮ್‌, ಬವುಮಾ(32) ವಿಕೆಟ್‌ ಕಿತ್ತರು.

ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ವೇಗಿ ಉಮೇಶ್‌ ಯಾದವ್‌ ಹಾಗೂ ಜಡೇಜಾ ತಲಾ ಎರಡು ವಿಕೆಟ್‌ ಕಬಳಿಸಿದರೆ, ವೇಗಿ ಮೊಹಮದ್‌ ಶಮಿ ಮತ್ತು ನದೀಮ್‌ ಒಂದೊಂದು ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.