ADVERTISEMENT

ಕೊರೊನಾ ಬಿಕ್ಕಟ್ಟು | ವಿಂಡೀಸ್‌ ಆಟಗಾರರ ವೇತನ ಕಡಿತ

ಪಿಟಿಐ
Published 30 ಮೇ 2020, 21:33 IST
Last Updated 30 ಮೇ 2020, 21:33 IST
ವೆಸ್ಟ್‌ ಇಂಡೀಸ್ ಕ್ರಿಕೆಟ್‌ ತಂಡದ ಆಟಗಾರರು (ಸಾಂದರ್ಭಿಕ ಚಿತ್ರ)
ವೆಸ್ಟ್‌ ಇಂಡೀಸ್ ಕ್ರಿಕೆಟ್‌ ತಂಡದ ಆಟಗಾರರು (ಸಾಂದರ್ಭಿಕ ಚಿತ್ರ)   

ಸೇಂಟ್‌ ಜಾನ್ಸ್‌, ಆ್ಯಂಟಿಗ ಮತ್ತು ಬಾರ್ಬುಡ: ಕೊರೊನಾ ಬಿಕ್ಕಟ್ಟಿನಿಂದ ತತ್ತರಿಸಿರುವ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ (ಸಿಡಬ್ಲ್ಯುಐ), ಆಟಗಾರರು ಹಾಗೂ ಎಲ್ಲಾ ಸಿಬ್ಬಂದಿಯ ವೇತನ ಕಡಿತ ಮಾಡಲು ಮುಂದಾಗಿದೆ. ಜುಲೈ ಆರಂಭದಿಂದಲೇ ಇದು ಅನ್ವಯವಾಗಲಿದೆ.

ಹಣಕಾಸು ಕಾರ್ಯತಂತ್ರ ಸಲಹಾ ಸಮಿತಿಯ (ಎಫ್‌ಎಸ್‌ಎಸಿ) ಶಿಫಾರಸಿನ ಆಧಾರದಲ್ಲಿಸಿಡಬ್ಲ್ಯುಐ ಈ ನಿರ್ಧಾರ ಕೈಗೊಂಡಿದೆ.

‘ಕೋವಿಡ್‌ನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಮಂಡಳಿಗೆ ಯಾವ ಆದಾಯವೂ ಬರುತ್ತಿಲ್ಲ. ನಷ್ಟವನ್ನು ಸರಿದೂಗಿಸುವ ಸಲುವಾಗಿಶೇಕಡ 50 ರಷ್ಟು ವೇತನ ಕಡಿತ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಇದು ತಾತ್ಕಾಲಿಕ ಕ್ರಮ’ ಎಂದು ಸಿಡಬ್ಲ್ಯುಐ, ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.