ADVERTISEMENT

ಎಫ್‌–1 ಚಾಲಕರಿಗೆ ಬೆನ್‌ ಸ್ಟೋಕ್ಸ್‌ ಸಡ್ಡು!

ಪಿಟಿಐ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST
ಬೆನ್‌ ಸ್ಟೋಕ್ಸ್‌ 
ಬೆನ್‌ ಸ್ಟೋಕ್ಸ್‌    

ಲಂಡನ್‌: ಸ್ಫೋಟಕ ಬ್ಯಾಟಿಂಗ್‌ ಹಾಗೂ ಆಕರ್ಷಕ ಬೌಲಿಂಗ್‌ ಮೂಲಕ ಕ್ರಿಕೆಟ್‌ ಅಂಗಳದಲ್ಲಿ ಮೋಡಿ ಮಾಡುತ್ತಿದ್ದ ಬೆನ್‌ ಸ್ಟೋಕ್ಸ್‌, ಈಗ ಫಾರ್ಮುಲಾ ಒನ್‌ ಮೋಟರ್‌ ಕಾರು ಚಾಲಕರಿಗೆ ಸಡ್ಡು ಹೊಡೆಯಲು ಸಜ್ಜಾಗಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಆಲ್‌ರೌಂಡರ್‌ ಸ್ಟೋಕ್ಸ್‌ ಪಾತ್ರ ಮಹತ್ವದ್ದಾಗಿತ್ತು.

ಮೆಲ್ಬರ್ನ್‌ನ ವರ್ಚುವಲ್‌ ಅಲ್ಬರ್ಟ್‌ ಪಾರ್ಕ್‌ನಲ್ಲಿ ನಡೆಯುವ ಎಫ್‌–1 ಇ–ಸ್ಪೋರ್ಟ್ಸ್‌ ಗ್ರ್ಯಾನ್‌ ಪ್ರಿ ರೇಸ್‌ನಲ್ಲಿ ಫೆರಾರಿ ತಂಡದ ಚಾರ್ಲ್ಸ್‌ ಲೆಕ್ಲರ್ಕ್‌, ರೆಡ್‌ಬುಲ್‌ ತಂಡದ ಅಲೆಕ್ಸ್‌ ಆಲ್ಬನ್‌, ಮೆಕ್‌ಲಾರೆನ್‌ ತಂಡದ ಲ್ಯಾಂಡೊ ನೋರಿಸ್‌ ಹಾಗೂ ವಿಲಿಯಮ್ಸ್‌ ತಂಡದ ಜಾರ್ಜ್‌ ರಸೆಲ್‌ ಮತ್ತು ನಿಕೋಲಸ್‌ ಲತೀಫಿ ಅವರೂ ಪಾಲ್ಗೊಳ್ಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.