ADVERTISEMENT

Photos | ಕ್ರಿಕೆಟ್‌ ಪ್ರಿಯರ ನೆಚ್ಚಿನ 'ಎಂಎಸ್‌ಡಿ'

2011ರಲ್ಲಿ ಕೋಲ್ಕತ್ತದ ಈಡನ್‌ ಕಾರ್ಡರ್ನ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆಲುವು ಪಡೆದ ನಂತರ ಮ್ಯಾನ್‌ ಆಫ್‌ ದಿ ಟೂರ್ನಮೆಂಟ್‌ ಪ್ರಶಸ್ತಿಯೊಂದಿಗೆ ಬೈಕ್ ಪಡೆದ ಎಂಎಸ್‌ ಧೋನಿ ಅವರು ಪ್ರವೀಣ್‌ ಕುಮಾರ್ ಮತ್ತು ಸುರೇಶ್ ರೈನಾ ಕೂರಿಸಿಕೊಂಡು ಕ್ರೀಡಾಂಗಣ ಸುತ್ತಿದ್ದರು. ಧೋನಿ ಅವರ ಸ್ವಚ್ಛಂದ ನಗು ಎದುರಾಳಿ ತಂಡದವರನ್ನು ಬಹುಬೇಗ ಸೆಳೆದು ಬಿಡುತ್ತಿತ್ತು. ಹಿರಿಯ, ಕಿರಿಯ ಯಾವುದೇ ಆಟಗಾರರೊಂದಿಗೆ ಬಹುಬೇಗ ಬೆರೆತು ಹೋಗುತ್ತಿದ್ದ ಧೋನಿ ಕೆಲವು ಸಲ ಗಂಭೀರ, ಅಷ್ಟೇ ಶಾಂತ. 'ಕ್ಯಾಪ್ಟನ್‌ ಕೂಲ್‌' ಎಂದೇ ಖ್ಯಾತರಾದ ಮಹೇಂದ್ರ ಸಿಂಗ್‌ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡದೊಂದಿಗೆ ಅವರ ಆಟ ಮುಂದುವರಿಯಲಿದೆ.

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 8:47 IST
Last Updated 16 ಆಗಸ್ಟ್ 2020, 8:47 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.