ADVERTISEMENT

ದಾಂಪತ್ಯ ಜೀವನಕ್ಕೆ ವರುಣ್ ಚಕ್ರವರ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 19:41 IST
Last Updated 13 ಡಿಸೆಂಬರ್ 2020, 19:41 IST
ಕ್ರಿಕೆಟಿಗ ವರುಣ್ ಚಕ್ರವರ್ತಿ ಅವರು ತಮ್ಮ ದೀರ್ಘಕಾಲದ ಗೆಳತಿ ನೇಹಾ ಖೇಡೆಕರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು –ಟ್ವಿಟರ್ ಚಿತ್ರ
ಕ್ರಿಕೆಟಿಗ ವರುಣ್ ಚಕ್ರವರ್ತಿ ಅವರು ತಮ್ಮ ದೀರ್ಘಕಾಲದ ಗೆಳತಿ ನೇಹಾ ಖೇಡೆಕರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು –ಟ್ವಿಟರ್ ಚಿತ್ರ   

ಚೆನ್ನೈ: ‌ತಮಿಳುನಾಡು ಕ್ರಿಕೆಟ್ ತಂಡದ ಆಟಗಾರ ವರುಣ್ ಚಕ್ರವರ್ತಿ ತಮ್ಮ ದೀರ್ಘಕಾಲದ ಗೆಳತಿ ನೇಹಾ ಖೇಡೆಕರ್ ಅವರೊಂದಿಗೆ ವಿವಾಹವಾದರು.

ಕರ್ನಾಟಕದ ಬೀದರ್‌ನಲ್ಲಿ ಜನಿಸಿ, ತಮಿಳುನಾಡಿನ ತಂಜಾವೂರಿನಲ್ಲಿ ಬೆಳೆದಿರುವ ವರುಣ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಾರೆ. ಚೆನ್ನೈನಲ್ಲಿ ಶನಿವಾರ ವಿವಾಹ ಸಮಾರಂಭವು ನೆರವೇರಿತು. ಕೆಕೆಆರ್ ಫ್ರಾಂಚೈಸಿ ವರುಣ್ ವಿವಾಹ ವಿಡಿಯೊವನ್ನು ಹಂಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT