ADVERTISEMENT

ಆ್ಯಷಸ್‌ ಸರಣಿ: ಉಳಿದ ಪಂದ್ಯಗಳಿಗೆ ಕಮಿನ್ಸ್‌, ಲಯನ್‌ ಅಲಭ್ಯ

ಏಜೆನ್ಸೀಸ್
Published 23 ಡಿಸೆಂಬರ್ 2025, 16:19 IST
Last Updated 23 ಡಿಸೆಂಬರ್ 2025, 16:19 IST
<div class="paragraphs"><p>ಪ್ಯಾಟ್‌ ಕಮಿನ್ಸ್‌</p></div>

ಪ್ಯಾಟ್‌ ಕಮಿನ್ಸ್‌

   

ಮೆಲ್ಬರ್ನ್‌: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಮತ್ತು ನೇಥನ್ ಲಯನ್ ಅವರು ಆ್ಯಷಸ್‌ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಲಯನ್ ಅವರು ಮಂಡಿರಜ್ಜು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ನಾಲ್ಕನೇ ಟೆಸ್ಟ್‌ಗೆ ಮಂಗಳವಾರ ತಂಡವನ್ನು ಪ್ರಕಟಿಸಲಾಯಿತು. ವೇಗದ ಬೌಲರ್ ಜೇ ರಿಚರ್ಡ್‌ಸನ್ ಮತ್ತು ಸ್ಪಿನ್ನರ್ ಟಾಡ್‌ ಮರ್ಫಿ ಅವರನ್ನು ಕಮಿನ್ಸ್ ಮತ್ತು ಲಯನ್ ಸ್ಥಾನಕ್ಕೆ ಸೇರ್ಪಡೆ ಮಾಡಲಾಗಿದೆ. 

ADVERTISEMENT

ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ ಪಡೆದಿದೆ. ನಾಲ್ಕನೇ ಟೆಸ್ಟ್‌ ಶುಕ್ರವಾರ ಮೆಲ್ಬರ್ನ್‌ನಲ್ಲಿ ಆರಂಭವಾಗಲಿದೆ.

‘ಸರಣಿಯ ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲ’ ಎಂದು ಕೋಚ್‌ ಆ್ಯಂಡ್ರೂ ಮೆಕ್‌ಡೊನಾಲ್ಡ್‌ ಕ್ರಿಕೆಟ್‌.ಕಾಮ್‌.ಎಯು.ಗೆ ತಿಳಿಸಿದ್ದಾರೆ. ಬೆನ್ನುನೋವಿಗೆ ಒಳಗಾದ ನಂತರ ಅವರು ಜುಲೈನಿಂದ ಆಡಿರಲಿಲ್ಲ. ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಪುನರಾಗಮನ ಮಾಡಿದ್ದರು. ಆರು ವಿಕೆಟ್‌ಗಳನ್ನೂ ಪಡೆದಿದ್ದರು.

ನಾಯಕತ್ವವನ್ನು ಸ್ಟೀವ್‌ ಸ್ಮಿತ್ ಅವರಿಗೆ ಮರಳಿ ವಹಿಸಲಾಗಿದೆ. ವರ್ಟಿಗೊ ಲಕ್ಷಣಗಳು ಕಾಣಿಸಿಕೊಂಡ ಕಾರಣ ಸ್ಮಿತ್ ನಾಲ್ಕನೇ ಟೆಸ್ಟ್‌ ಆಡಿರಲಿಲ್ಲ.

ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್ ಈ ಸರಣಿಯಲ್ಲಿ ಇದುವರೆಗೆ 22 ವಿಕೆಟ್‌ಗಳನ್ನು (17.04 ಸರಾಸರಿ) ಪಡೆದಿದ್ದಾರೆ. ಕೆಳಕ್ರಮಾಂಕದಲ್ಲಿ ಆಡಿ 150 ರನ್ ಸಹ ಗಳಿಸಿದ್ದಾರೆ.

ತಂಡ ಇಂತಿದೆ: ಸ್ಟೀವ್‌ ಸ್ಮಿತ್ (ನಾಯಕ), ಸ್ಕಾಟ್‌ ಬೋಲ್ಯಾಂಡ್‌, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಜೆಟ್‌, ಕ್ಯಾಮರಾನ್ ಗ್ರೀನ್‌, ಟ್ರಾವಿಸ್‌ ಹೆಡ್‌, ಜೋಶ್ ಇಂಗ್ಲಿಸ್‌, ಉಸ್ಮಾನ್ ಖ್ವಾಜಾ, ಮಾರ್ನಸ್‌ ಲಾಬುಷೇನ್‌, ಟಾಡ್‌ ಮರ್ಫಿ, ಮೈಕೆಲ್ ನೆಸೆರ್‌, ಜೇ ರಿಚರ್ಡ್‌ಸನ್‌, ಮಿಚೆಲ್ ಸ್ಟಾರ್ಕ್‌, ಜೇಕ್‌ ವೆದೆರಾಲ್ಡ್‌, ಬ್ಯೂ ವೆಬ್‌ಸ್ಟರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.