ADVERTISEMENT

IPL 2025 | DC vs MI: ನಿಧಾನಗತಿಯ ಓವರ್‌; ಅಕ್ಷರ್‌ಗೆ ₹12 ಲಕ್ಷ ದಂಡ

ಪಿಟಿಐ
Published 14 ಏಪ್ರಿಲ್ 2025, 12:45 IST
Last Updated 14 ಏಪ್ರಿಲ್ 2025, 12:45 IST
ಅಕ್ಷರ್‌ ಪಟೇಲ್‌
ಅಕ್ಷರ್‌ ಪಟೇಲ್‌   

ನವದೆಹಲಿ: ನಿಗದಿತ ಅವಧಿಯೊಳಗೆ ಓವರ್‌ಗಳನ್ನು ಮುಗಿಸುವಲ್ಲಿ ವಿಫಲರಾದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ.

ಭಾನುವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 12 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತು.

‘ಈ ಆವೃತ್ತಿಯಲ್ಲಿ ಅಕ್ಷರ್‌ ಪಟೇಲ್‌ ಸಾರಥ್ಯದ ಡೆಲ್ಲಿ ತಂಡದ ಮೊದಲ ಪ್ರಕರಣ ಇದಾಗಿದೆ. ಐಪಿಎಲ್ ನಿಯಮ 2.22ರ ಪ್ರಕಾರ ದಂಡ ವಿಧಿಸಲಾಗಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.