ADVERTISEMENT

ಕನ್ನಡಿಗ ಪಡಿಕ್ಕಲ್ ಶತಕದ ವೈಭವ: ಆಸ್ಟ್ರೇಲಿಯಾ ಎ ವಿರುದ್ಧ ಬೃಹತ್ ಮೊತ್ತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 8:11 IST
Last Updated 19 ಸೆಪ್ಟೆಂಬರ್ 2025, 8:11 IST
<div class="paragraphs"><p>ದೇವದತ್ತ ಪಡಿಕ್ಕಲ್ ಶತಕದ ಸೊಬಗು</p></div>

ದೇವದತ್ತ ಪಡಿಕ್ಕಲ್ ಶತಕದ ಸೊಬಗು

   

(ಪಿಟಿಐ ಚಿತ್ರ)

ಲಖನೌ: ಇಲ್ಲಿನ ಏಕನಾ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ನಡೆಯುತ್ತಿರುವ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಅಮೋಘ 150 ರನ್ ಸಿಡಿಸುವ ಮೂಲಕ ಭಾರತ ‘ಎ‘ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು.

ADVERTISEMENT

ಮೂರನೇ ದಿನದಾಟದ ಅಂತ್ಯದಲ್ಲಿ 86 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಪಡಿಕ್ಕಲ್, ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲಿ ಶತಕ ಸಿಡಿಸಿದರು. ಮಾತ್ರವಲ್ಲ ಅವರು ಊಟದ ವಿರಾಮದ ವೇಳೆಗೆ 150 ರನ್ ಸಿಡಿಸಿ ಔಟ್ ಆದರು. ಇನ್ನೂ ಇವರಿಗೆ ಸಾಥ್ ನೀಡಿದ ವಿಕೆಟ್‌ ಕೀಪರ್‌ ಧ್ರುವ್‌ ಜುರೇಲ್ 140 ರನ್ ಗಳಿಸಿ ಔಟ್ ಆದರು. ಈ ಇಬ್ಬರ 228 ರನ್‌ಗಳ ಉತ್ತಮ ಜೊತೆಯಾಟದ ನೆರವಿನಿಂದ ಊಟದ ವಿರಾಮದ ವೇಳೆಗೆ ಭಾರತ ಎ ತಂಡ 7 ವಿಕೆಟ್ ಕಳೆದುಕೊಂಡು 520 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಆಸ್ಟ್ರೇಲಿಯಾ ಎ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 532 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಸದ್ಯ, 4ನೇ ದಿನದಾಟದ ಊಟದ ವಿರಾಮದ ಬಳಿಕ ಪಂದ್ಯ ಆರಂಭವಾದ ಕೆಲವೇ ನಿಮಿಷದಲ್ಲಿ ಮಳೆ ಆರಂಭವಾಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 1 ರನ್‌ನಿಂದ ಹಿನ್ನಡೆ ಅನುಭವಿಸುತ್ತಿದ್ದು, ಪಂದ್ಯ ಡ್ರಾ ಹಾದಿಯಲ್ಲಿದೆ.

ಭಾರತದ ಪರ ಅಭಿಮನ್ಯು ಈಶ್ವರನ್ (44) ಎನ್‌.ಜಗದೀಶನ್ (64), ಬಿ.ಸಾಯಿ ಸುದರ್ಶನ್‌ (73) ರನ್ ಗಳಿಸುವ ಮೂಲಕ ಭಾರತ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.