
ಪ್ರಜಾವಾಣಿ ವಾರ್ತೆ
ಕೊಲಂಬೊ: ಗಾಯಾಳು ಮಥೀಶ ಪಥಿರಾಣ ಬದಲಿಗೆ ವೇಗಿ ದಿಲ್ಶಾನ್ ಮಧುಶನಾಕ ಅವರು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
‘ಮಧುಶನಾಕ ಅವರು ಬದಲಿ ಆಟಗಾರನಾಗಿ ಸ್ಥಾನ ಪಡೆದಿರುವುದನ್ನು ತಾಂತ್ರಿಕ ಸಮಿತಿಯು ಅನುಮೋದಿಸಿದೆ’ ಎಂದು ಐಸಿಸಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬಲಗೈ ವೇಗಿ ಪಥಿರಾಣ ಅವರು ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದರು. ಹಾಗಾಗಿ, ಅರ್ಧದಲ್ಲೇ ಮೈದಾನದಿಂದ ಹೊರನಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.