ಡ್ರೀಮ್11
(ಚಿತ್ರ ಕೃಪೆ: X/@Dream11)
ಮುಂಬೈ: ಆನ್‌ಲೈನ್ ಫ್ಯಾಂಟಸಿ ಗೇಮಿಂಗ್ ಫ್ಲಾಟ್‌ಫಾರ್ಮ್ 'ಡ್ರೀಮ್11', ಭಾರತ ಕ್ರಿಕೆಟ್ ತಂಡದೊಂದಿಗಿನ ಪ್ರಾಯೋಜಕತ್ವ ಒಪ್ಪಂದವನ್ನು ತೊರೆಯಲಿದೆ ಎಂದು ವರದಿಯಾಗಿದೆ.
ಹಣ ಹೂಡಿ ಆಡುವ ಎಲ್ಲ ರೀತಿಯ ಆನ್‌ಲೈನ್ ಗೇಮ್‌ಗಳು, ಇ–ಸ್ಪೋರ್ಟ್ಸ್‌ಗಳು ಮತ್ತು ಆನ್‌ಲೈನ್ ಸೋಷಿಯಲ್ ಗೇಮ್‌ಗಳನ್ನು ನಿಷೇಧಿಸುವ ಮಹತ್ವದ ಮಸೂದೆಗೆ ಸಂಸತ್ತು ಸಮ್ಮತಿ ನೀಡಿತ್ತು.
ಇದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ಕಂಡುಬಂದಿದೆ ಎಂದು 'ಎಕಾನಮಿಕ್ ಟೈಮ್ಸ್' ವರದಿ ಮಾಡಿದೆ.
ಬಿಸಿಸಿಐನೊಂದಿಗೆ ಬರೋಬ್ಬರಿ ₹358 ಕೋಟಿ ಮೊತ್ತದ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು ಡ್ರೀಮ್11 ಹೊಂದಿದೆ.
ಮುಂಬರುವ ಏಷ್ಯಾ ಕಪ್ ಟೂರ್ನಿಗೂ ಮುನ್ನ ಒಪ್ಪಂದವನ್ನು ಕೊನೆಗೊಳಿಸಲು ಡ್ರೀಮ್11 ಮುಂದಾಗಿದ್ದು, ಈ ಸಂಬಂಧ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ಆರಂಭಿಸಿದೆ ಎಂದು ತಿಳಿದು ಬಂದಿದೆ.
2023ರಲ್ಲಿ ಮೂರು ವರ್ಷಗಳ ಅವಧಿಗೆ ಡ್ರೀಮ್11 ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೆ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ತನ್ನ ಲೊಗೊವನ್ನು ಮುದ್ರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.