ADVERTISEMENT

ನಿವೃತ್ತಿ ಗೊಂದಲದ ನಡುವೆ ಅಭ್ಯಾಸ ಆರಂಭಿಸಿದ ಧೋನಿ: ಅಚ್ಚರಿ ಮೂಡಿಸಿದ ಮಿ.ಕೂಲ್ ನಡೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 14:45 IST
Last Updated 16 ಜನವರಿ 2020, 14:45 IST
   

ರಾಂಚಿ:ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ ಜೀವನ ಇನ್ನೇನು ಮುಗಿದೇ ಬಿಟ್ಟಿತು ಎಂಬ ಚರ್ಚೆಕ್ರಿಕೆಟ್‌ ವಲಯದಲ್ಲಿ ಕಾವು ಪಡೆದುಕೊಂಡಿದೆ. ಆದರೆ, ಇದಾವುದಕ್ಕೂತಲೆ ಕೆಡಿಸಿಕೊಳ್ಳದ ಮಿ.ಕೂಲ್‌ ಜಾರ್ಖಂಡ್ ತಂಡದೊಂದಿಗೆ ಅಭ್ಯಾಸ ಆರಂಭಿಸಿ, ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ರಾಂಚಿಯಲ್ಲಿ ನೆಟ್‌ ಪ್ರಾಕ್ಟೀಸ್‌ ನಡೆಸುತ್ತಿರುವ 38 ವರ್ಷದ ಧೋನಿ, ಐಪಿಎಲ್‌ ಸೇರಿ ಮುಂದಿನ ಸರಣಿಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.ರಣಜಿ ಟೂರ್ನಿಯ ತನ್ನ ಮುಂದಿನ ಪಂದ್ಯದಲ್ಲಿಜಾರ್ಖಂಡ್‌ ತಂಡಉತ್ತರಖಂಡ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯವು ಜನವರಿ 19ರ ರಾಂಚಿಯಲ್ಲಿ ಆರಂಭವಾಗಲಿದೆ.

2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕಳೆದ ಜುಲೈನಿಂದಭಾರತ ತಂಡಕ್ಕೆ ಅಲಭ್ಯರಾಗಿರುವುದರಿಂದ ಅವರನ್ನುಆಟಗಾರರ ವಾರ್ಷಿಕ ಒಪ್ಪಂದ ಪಟ್ಟಿಯಿಂದಲೂ ಬಿಸಿಸಿಐ ಕೈಬಿಟ್ಟಿದೆ.

ಟೀಂ ಇಂಡಿಯಾ ಮುಖ್ಯಕೋಚ್‌ ರವಿಶಾಸ್ತ್ರಿ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಧೋನಿ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಹೀಗಾಗಿ ಧೋನಿ ನಿವೃತ್ತಿ ಕುರಿತು ಗೊಂದಲ ಮೂಡಿವೆ.

ಧೋನಿ ಅಭ್ಯಾಸಕ್ಕೆ ಆಗಮಿಸಿದ್ದರಿಂದ ಅಚ್ಚರಿಗೊಂಡಿರುವಜಾರ್ಖಂಡ್‌ ತಂಡದ ಸಂಯೋಜಕರು,‘ಧೋನಿ ನಮ್ಮ ತಂಡದೊಂದಿಗೆ ಅಭ್ಯಾಸ ನಡೆಸುತ್ತಾರೆ ಎಂಬುದು ನಮಗೂ ಗೊತ್ತಿರಲಿಲ್ಲ. ಇದು ಒಂದು ರೀತಿಯ ಅಚ್ಚರಿಗೆ ಕಾರಣವಾಗಿದೆ. ಅವರು ಕೆಲಕಾಲ ಬ್ಯಾಟಿಂಗ್‌ ಮಾಡಿದರು. ಎಂದಿನಂತೆ ಅಭ್ಯಾಸ ನಡೆಸಿದರು’ ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿಸಾಧನೆ

ಮಾದರಿ ಪಂದ್ಯ ಇನಿಂಗ್ಸ್‌ ರನ್‌ ಶತಕ ಅರ್ಧಶತಕ ಕ್ಯಾಚ್ ಸ್ಟಂಪಿಂಗ್ಸ್
ಟೆಸ್ಟ್‌ 90 144 4876 6 33 256 38
ಏಕದಿನ 350 297 10773 10 73 321 123
ಟಿ20 98 85 1617 2 57 34

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.