ADVERTISEMENT

ಟಿ20 ವಿಶ್ವಕಪ್‌: ತಂಡಗಳಿಗೆ ಸಿಗಲಿದೆ ಡಿಆರ್‌ಎಸ್‌ ಪಡೆಯುವ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2021, 11:50 IST
Last Updated 10 ಅಕ್ಟೋಬರ್ 2021, 11:50 IST
ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಪಂದ್ಯವೊಂದರ ವೇಳೆ ಡಿಆರ್‌ಎಸ್‌ ಮನವಿ ಮಾಡುತ್ತಿರುವುದು.
ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಪಂದ್ಯವೊಂದರ ವೇಳೆ ಡಿಆರ್‌ಎಸ್‌ ಮನವಿ ಮಾಡುತ್ತಿರುವುದು.   

ನವದೆಹಲಿ: ಇದೇ ತಿಂಗಳು ಒಮನ್‌ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಂಪೈರ್‌ ತೀರ್ಪು ಪರಿಶೀಲನಾ ವ್ಯವಸ್ಥೆಯನ್ನು (ಡಿಆರ್‌ಎಸ್‌) ಪರಿಚಯಿಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಚುಟುಕು ವಿಶ್ವಕಪ್‌ ಟೂರ್ನಿಯು ಅಕ್ಟೋಬರ್‌17 ರಿಂದ ನವೆಂಬರ್‌ 14ರ ವರೆಗೆ ನಡೆಯಲಿದೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿಪ್ರಕಾರ,ಪ್ರತಿತಂಡವು ಒಂದು ಇನಿಂಗ್ಸ್‌ನಲ್ಲಿ ಗರಿಷ್ಠ ಎರಡು ಡಿಆರ್‌ಎಸ್‌ ತೆಗೆದುಕೊಳ್ಳಬಹುದಾಗಿದೆ.

ADVERTISEMENT

ʼಕೋವಿಡ್-19 ಕಾರಣದಿಂದಾಗಿ ಕೆಲವೊಮ್ಮೆ ಪಂದ್ಯಗಳ ಸಂದರ್ಭದಲ್ಲಿಹೆಚ್ಚು ಅನುಭವ ಹೊಂದಿರದ ಅಂಪೈರ್‌ಗಳು ಕರ್ತವ್ಯ ನಿರ್ವಹಿಸಬಹುದುʼ ಎಂಬುದನ್ನು ಗಮನದಲ್ಲಿರಿಸಿಎಲ್ಲ ಮಾದರಿಯ ಪಂದ್ಯಗಳಲ್ಲಿಯೂ ಡಿಆರ್‌ಎಸ್‌ ಪಡೆದುಕೊಳ್ಳುವ ಅವಕಾಶವನ್ನು ತಂಡಗಳಿಗೆ ನೀಡುವುದಾಗಿ ಕಳೆದ ವರ್ಷ ಜೂನ್‌ನಲ್ಲೇ ಐಸಿಸಿಪ್ರಕಟಿಸಿತ್ತು.

ಹಾಗಾಗಿ ನಿಗದಿತ ಓವರ್‌ಗಳ ಪಂದ್ಯದಲ್ಲಿ ಪ್ರತಿ ಇನಿಂಗ್ಸ್‌ಗೆ ಎರಡು ಮತ್ತು ಟೆಸ್ಟ್‌ ಪಂದ್ಯಗಳಲ್ಲಿ ಮೂರು ಡಿಆರ್‌ಎಸ್‌ ನೀಡಲಾಗುವುದು.

ಈ ಹಿಂದಿನ (2016ರ) ಟಿ20 ವಿಶ್ವಕಪ್‌ ಟೂರ್ನಿವೇಳೆಡಿಆರ್‌ಎಸ್‌ ಅನ್ನು ಬಳಕೆ ಮಾಡಿರಲಿಲ್ಲ.

2018ರಲ್ಲಿ ನಡೆದ ಮಹಿಳಾಟಿ20 ಟೂರ್ನಿಯಲ್ಲಿ ಡಿಆರ್‌ಎಸ್‌ ಬಳಸಲಾಗಿತ್ತು. ಐಸಿಸಿಯ ಅಂತರರಾಷ್ಟ್ರೀಯಚುಟುಕು ಕ್ರಿಕೆಟ್‌ನಲ್ಲಿ ಈ ವ್ಯವಸ್ಥೆಬಳಕೆ ಮಾಡಿದ್ದು ಅದೇ ಮೊದಲು.ಅದಾದ ನಂತರ2020ರಲ್ಲಿ ಆಸ್ಟ್ರೇಲಿಯಾದಲ್ಲಿಅಯೋಜನೆಗೊಂಡ ಮಹಿಳಾಟಿ20 ಟೂರ್ನಿಯಲ್ಲಿಯೂ ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.