ADVERTISEMENT

‘ದೊಡ್ಡ’ ದಾಖಲೆ ಬರೆದ ಇಂಗ್ಲೆಂಡ್

ಮಹಿಳಾ ಟ್ವೆಂಟಿ–20: ಟ್ಯಾಮಿ ಬೇಮೌಂಟ್ ಮಿಂಚಿನ ಶತಕ; ದಕ್ಷಿಣ ಆಫ್ರಿಕಾಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 17:26 IST
Last Updated 21 ಜೂನ್ 2018, 17:26 IST
ಟ್ಯಾಮಿ ಬೇಮೌಂಟ್
ಟ್ಯಾಮಿ ಬೇಮೌಂಟ್   

ಲಂಡನ್: ಆತಿಥೇಯ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಗುರುವಾರ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆಯಿತು.

ಇಲ್ಲಿ ನಡೆಯುತ್ತಿರುವ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 250 ರನ್‌ಗಳನ್ನು ದಾಖಲಿಸಿತು. ಇದು ಮಹಿಳೆಯರ ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ದೊಡ್ಡ ಮೊತ್ತ. ಟ್ಯಾಮಿ ಬೇಮೌಂಟ್ (116; 52ಎ, 18ಬೌಂ, 4ಸಿ) ಅವರ ಅಬ್ಬರದ ಶತಕದ ಬಲದಿಂದ ಇಂಗ್ಲೆಂಡ್‌ ತಂಡ ಈ ಮೊತ್ತ ಕಲೆ ಹಾಕಿತು. ಗುರಿ ಬೆನ್ನತ್ತಿದ ಧಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 129 ರನ್‌ ಗಳಿಸಿತು. ಇಂಗ್ಲೆಂಡ್ 121 ರನ್‌ಗಳಿಂದ ಗೆದ್ದಿತು.

ಎರಡು ದಿನಗಳ ಹಿಂದಷ್ಟೇ ಇಂಗ್ಲೆಂಡ್‌ನ ಪುರುಷರ ತಂಡವು ಆಸಿಸ್ ವಿರುದ್ಧ ಆರು ವಿಕೆಟ್ ನಷ್ಟಕ್ಕೆ 481 ರನ್ ದಾಖಲಿಸಿ ವಿಶ್ವದಾಖಲೆ ನಿರ್ಮಿಸಿತ್ತು. ಇದೀಗ ಮಹಿಳಾ ಕ್ರಿಕೆಟ್ ತಂಡ ದಾಖಲೆ ಬರೆದಿದೆ. ಈಚೆಗೆ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 216ರನ್ ಪೇರಿಸಿದ್ದು, ಈವರೆಗಿನ ಗರಿಷ್ಠ ರನ್ ದಾಖಲೆಯಾಗಿತ್ತು.

ಸಂಕ್ಷಿಪ್ತಸ್ಕೋರು: ಇಂಗ್ಲೆಂಡ್: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 250 (ಡೇನಿಯಲ್ ವೈಟ್ 56, ಟ್ಯಾಮಿ ಬೇಮೌಂಟ್ 116, ಕ್ಯಾಥರೀನ್ ಬ್ರಂಟ್ 42, ಶಬ್ನಿಮ್ ಇಸ್ಮಾಯಿಲ್ 42ಕ್ಕೆ1, ಲ್ಯಾಕಿ 59ಕ್ಕೆ2) ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 129 (ವ್ಯಾನ್ ನೀಕರ್ಕ್ 72, ಕ್ಯಾಥರಿನ್ ಬ್ರಂಟ್ 18ಕ್ಕೆ2, ಹ್ಯಾಜೆಲ್ 35ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 121 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.