ADVERTISEMENT

ಪಾಕ್ ಪಡೆಗೆ ತವರಿನಲ್ಲೇ ಮುಖಭಂಗ; ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಇಂಗ್ಲೆಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2022, 7:07 IST
Last Updated 20 ಡಿಸೆಂಬರ್ 2022, 7:07 IST
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ (ಚಿತ್ರಕೃಪೆ: Twitter / @englandcricket)
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ (ಚಿತ್ರಕೃಪೆ: Twitter / @englandcricket)   

ಕರಾಚಿ: ಆತಿಥೇಯ ಪಾಕಿಸ್ತಾನ ವಿರುದ್ಧ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲೂ ಗೆಲುವಿನ ನಗೆ ಬೀರಿರುವ ಇಂಗ್ಲೆಂಡ್‌ ತಂಡ, ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

ಇಲ್ಲಿನ ನ್ಯಾಷನಲ್‌ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 17) ಆರಂಭವಾದ ಮೂರನೇ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದಪಾಕಿಸ್ತಾನ, ಮೊದಲ ಇನಿಂಗ್ಸ್‌ನಲ್ಲಿ304 ರನ್ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್‌ 354 ರನ್‌ ಗಳಿಸಿ 50 ರನ್‌ ಅಂತರದ ಮುನ್ನಡೆ ಸಾಧಿಸಿತ್ತು.

ಬಳಿಕ ಎರಡನೇ ಇನಿಂಗ್ಸ್‌ ಆರಂಭಿಸಿದ ಬಾಬರ್‌ ಅಜಂ ಬಳಗ 216 ರನ್‌ ಗಳಿಗೆ ಸರ್ವಪತನ ಕಂಡಿತು.166 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಆಂಗ್ಲರ ನಾಡಿನ ತಂಡ ಕೇವಲ 2 ವಿಕೆಟ್‌ ಕಳೆದುಕೊಂಡು 170 ರನ್‌ ಗಳಿಸಿತು.

ADVERTISEMENT

ಇದರೊಂದಿಗೆ ಪಾಕ್‌ ಪಡೆ, ತವರಿನಲ್ಲೇಮುಖಭಂಗ ಅನುಭವಿಸಿತು.

ರಾವಲ್ಪಿಂಡಿಯಲ್ಲಿ ನಡೆದ ಮೊದಲ ಪಂದ್ಯವನ್ನು74 ರನ್‌ಗಳಿಂದ ಗೆದ್ದಿದ್ದ ಬೆನ್‌ ಸ್ಟೋಕ್ಸ್‌ ಬಳಗ, ಮುಲ್ತಾನ್‌ನಲ್ಲಿ ಆಡಿದಎರಡನೇ ಪಂದ್ಯವನ್ನು 26 ರನ್‌ ಅಂತರದಿಂದ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.