ಥಾಮಸ್ ರಿವ್
ಚಿತ್ರಕೃಪೆ:Getty Images
ನಾರ್ತಾಂಪ್ಟನ್: ನಾಯಕ ಥಾಮಸ್ ರಿವ್ ಅವರ ಅಮೋಘ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಸೋಮವಾರ ನಡೆದ ಎರಡನೇ ಯುವ (19 ವರ್ಷದೊಳಗಿನವರ) ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಒಂದು ವಿಕೆಟ್‌ನಿಂದ ಸೋಲಿಸಿತು. ಐದು ಪಂದ್ಯಗಳ ಸರಣಿ ಈಗ 1–1ರಲ್ಲಿ ಸಮನಾಯಿತು.
ಹೋವ್‌ನಲ್ಲಿ ಜೂನ್ 28ರಂದು ನಡೆದ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ದಾಖಲಿಸಿತ್ತು. ಮೂರನೇ ಪಂದ್ಯ ಬುಧವಾರ ನಡೆಯಲಿದೆ.
ಬ್ಯಾಟಿಂಗಿಗೆ ಕಳುಹಿಸಲ್ಪಟ್ಟ ಭಾರತ 49 ಓವರುಗಳಲ್ಲಿ 290 ರನ್ ಗಳಿಸಿತು. ಆತಿಥೇಯರು ಇನ್ನೂ ಮೂರು ಎಸೆತ ಉಳಿದಿರುವಂತೆ 9 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿದರು. ರಿವ್ 89 ಎಸೆತಗಳಲ್ಲಿ 131 ರನ್ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 14 ಬೌಂಡರಿ, ಆರು ಸಿಕ್ಸರ್‌ಗಳಿದ್ದವು.
ಸಂಕ್ಷಿಪ್ತ ಸ್ಕೋರು:
ಭಾರತ: 49 ಓವರುಗಳಲ್ಲಿ 290 (ವೈಭವ್ ಸೂರ್ಯವಂಶಿ 45, ವಿಹಾನ್ ಮಲ್ಹೋತ್ರಾ 49, ರಾಹುಲ್ ಕುಮಾರ್ 47, ಕನಿಷ್ಕ್ ಚೌಹಾನ್ 45; ಎ.ಎಂ.ಫ್ರೆಂಚ್ 71ಕ್ಕೆ4, ಜಾಕ್ ಹೋಮ್ 63ಕ್ಕೆ3, ಅಲೆಕ್ಸ್ ಗ್ರೀನ್ 50ಕ್ಕೆ3); ಇಂಗ್ಲೆಂಡ್: 49.3 ಓವರುಗಳಲ್ಲಿ 9 ವಿಕೆಟ್‌ಗೆ 291 (ಥಾಮಸ್ ರಿವ್ 131, ರಾಕಿ ಫ್ಲಿಂಟಾಫ್ 39; ಆರ್.ಎಸ್.ಅಂಬರೀಶ್ 80ಕ್ಕೆ4).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.