ಬಾಬರ್ ಅಜಂ ಹಾಗೂ ವಿರಾಟ್ ಕೊಹ್ಲಿ
ಪಿಟಿಐ ಚಿತ್ರಗಳು
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಅಜಂ, ಏಕದಿನ ಮಾದರಿಯಲ್ಲಿ ವೇಗವಾಗಿ 6 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ, ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ 29 ರನ್ ಕಲೆಹಾಕಿ ಔಟಾದ ಬಾಬರ್, 10 ರನ್ ಗಳಿಸಿದ್ದಾಗ 6,000 ರನ್ ಗಡಿ ದಾಟಿದರು. ಇದರೊಂದಿಗೆ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಶೀಂ ಆಮ್ಲಾ ಅವರ ಹೆಸರಲ್ಲಿರುವ ದಾಖಲೆಯನ್ನು ಸರಿ ಗಟ್ಟಿದರು. ಆಮ್ಲಾ, ತಮ್ಮ 123ನೇ ಇನಿಂಗ್ಸ್‌ನಲ್ಲಿ ಇಷ್ಟು ರನ್ ಗಳಿಸಿದ್ದರು.
ವೇಗವಾಗಿ 6,000 ರನ್ ಕಲೆಹಾಕಿದ ಬ್ಯಾಟರ್‌ಗಳ ಸಾಲಿನಲ್ಲಿ ಭಾರತದ ವಿರಾಟ್ ಕೊಹ್ಲಿ ಅವರು, ಆಮ್ಲಾ ಮತ್ತು ಬಾಬರ್ ನಂತರದ ಸ್ಥಾನದಲ್ಲಿದ್ದಾರೆ.
ಏಕದಿನ ಮಾದರಿಯಲ್ಲಿ ಈವರೆಗೆ ಒಟ್ಟು 126 ಪಂದ್ಯಗಳ 123 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬಿಸಿರುವ ಬಾಬರ್, 19 ಶತಕ ಮತ್ತು 34 ಅರ್ಧಶತಕ ಸಹಿತ 6,019 ರನ್ ಕಲೆಹಾಕಿದ್ದಾರೆ. 55.73 ಅವರ ಬ್ಯಾಟಿಂಗ್ ಸರಾಸರಿ.
ವೇಗವಾಗಿ 6 ಸಾವಿರ ರನ್ ಕಲೆಹಾಕಿದವರು
ಹಾಶೀಂ ಆಮ್ಲಾ (ದಕ್ಷಿಣ ಆಫ್ರಿಕಾ): 123ನೇ ಇನಿಂಗ್ಸ್
ಬಾಬರ್ ಅಜಂ (ಪಾಕಿಸ್ತಾನ): 123ನೇ ಇನಿಂಗ್ಸ್
ವಿರಾಟ್ ಕೊಹ್ಲಿ (ಭಾರತ): 136ನೇ ಇನಿಂಗ್ಸ್
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 139ನೇ ಇನಿಂಗ್ಸ್
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 139ನೇ ಇನಿಂಗ್ಸ್
ಶಿಖರ್ ಧವನ್ (ಭಾರತ): 140ನೇ ಇನಿಂಗ್ಸ್
ವಿವಿಯನ್ ರಿಚರ್ಡ್ಸನ್ (ವೆಸ್ಟ್ ಇಂಡೀಸ್): 141ನೇ ಇನಿಂಗ್ಸ್
ಜೋ ರೂಟ್ (ಇಂಗ್ಲೆಂಡ್): 141ನೇ ಇನಿಂಗ್ಸ್
ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): 142ನೇ ಇನಿಂಗ್ಸ್
ಸೌರವ್ ಗಂಗೂಲಿ (ಭಾರತ): 147ನೇ ಇನಿಂಗ್ಸ್
ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ): 147ನೇ ಇನಿಂಗ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.