ADVERTISEMENT

PHOTOS | ನಿತೀಶ್ ಕುಮಾರ್ ರೆಡ್ಡಿ 'ಫೈರ್ ಅಲ್ಲ, ವೈಲ್ಡ್ ಫೈರ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 11:43 IST
Last Updated 28 ಡಿಸೆಂಬರ್ 2024, 11:43 IST
<div class="paragraphs"><p>ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ, ಚೊಚ್ಚಲ ಶತಕದ ಸಾಧನೆ ಮಾಡಿದ್ದಾರೆ.</p></div>

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ, ಚೊಚ್ಚಲ ಶತಕದ ಸಾಧನೆ ಮಾಡಿದ್ದಾರೆ.

   

(ಚಿತ್ರ ಕೃಪೆ: X/@BCCI)

ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ನಿತೀಶ್ ಶತಕ ಗಳಿಸುವ ಮೂಲಕ ಭಾರತಕ್ಕೆ ಆಪದ್ಬಾಂಧವ ಎನಿಸಿದ್ದಾರೆ.

ADVERTISEMENT

21 ವರ್ಷದ ನಿತೀಶ್ ಕುಮಾರ್, ಆಸ್ಟ್ರೇಲಿಯಾ ನೆಲದಲ್ಲಿ ಶತಕ ಗಳಿಸಿದ ಭಾರತದ ಮೂರನೇ ಅತಿ ಕಿರಿಯ ಬ್ಯಾಟರ್ ಎನಿಸಿದ್ದಾರೆ.

ನಿತೀಶ್ ಕುಮಾರ್ ರೆಡ್ಡಿ 176 ಎಸೆತಗಳಲ್ಲಿ ಅಜೇಯ105 ರನ್ (10 ಬೌಂಡರಿ, 1 ಸಿಕ್ಸರ್) ಗಳಿಸಿದರು. 

ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ನಿತೀಶ್-ವಾಷ್ಟಿಂಗನ್ ಸುಂದರ್ ಜೋಡಿ ಭಾರತವನ್ನು ಫಾಲೋ ಆನ್‌ನಿಂದ ಪಾರಾಗಲು ನೆರವಾದರು.

ವಾಷಿಂಗ್ಟನ್ ಸುಂದರ್ ಆಕರ್ಷಕ ಅರ್ಧಶತಕ ಗಳಿಸಿದರು. ಅಲ್ಲದೆ ನಿತೀಶ್ ಜತೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

ನಿತೀಶ್ ಕುಮಾರ್ ರೆಡ್ಡಿ ಅಮೋಘ ಶತಕ

ಅರ್ಧಶತಕ ಗಳಿಸಿದ ಬೆನ್ನಲ್ಲೇ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ 'ತಗ್ಗೋದೆ ಇಲ್ಲ' ಎಂಬ ಶೈಲಿಯಲ್ಲಿ ಸಂಭ್ರಮಿಸಿದ ನಿತೀಶ್

ಬಳಿಕ ಶತಕ ಗಳಿಸಿದಾಗ ಬಾಹುಬಲಿಯ ಪ್ರಭಾಸ್ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ

ನಿತೀಶ್ ಕುಮಾರ್ ಶತಕವನ್ನು ಅಲ್ಲೇ ಪಕ್ಕದಲ್ಲಿ ಗ್ಯಾಲರಿಯಲ್ಲಿ ಕುಳಿತುಕೊಂಡು ವೀಕ್ಷಿಸುತ್ತಿದ್ದ ತಂದೆ ಕಣ್ತುಂಬಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.