ನವದೆಹಲಿ: ಇನ್ನೇನು ಏಷ್ಯಾ ಕಪ್ ಪಂದ್ಯಗಳು ಆರಂಭವಾಗಲಿವೆ. ಈ ನಡುವೆ ಸಣ್ಣ ವಿರಾಮ ಪಡೆದುಕೊಂಡಿರುವ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಭಾಗವಹಿಸಿದ್ದಾರೆ.
ಈ ವೇಳೆ ಗಂಭೀರ್ ‘ರ್‍ಯಾಪಿಡ್ ಫೈರ್’ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ‘ಯಾವ ಪದಕ್ಕೆ ಯಾವ ಆಟಗಾರ ಸೂಕ್ತ’ ಎಂಬ ಪ್ರಶ್ನೆಗಳಿಗೆ ಅವರು ಟೀಮ್ ಇಂಡಿಯಾ ಆಟಗಾರರ ಹೆಸರನ್ನು ಸೂಚಿಸಿದ್ದಾರೆ. ‘ಮೋಸ್ಟ್ ಸ್ಟೈಲಿಷ್’ ಪದಕ್ಕೆ ಯಾರು ಸೂಕ್ತ ಎಂದು ಕೇಳಿದ್ದಕ್ಕೆ ಭಾರತದ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.
‘ಮೋಸ್ಟ್ ಸ್ಟೈಲಿಷ್’ ಪದಕ್ಕೆ ವಿರಾಟ್ ಕೊಹ್ಲಿ ಅಥವಾ ಹಾರ್ದಿಕ್ ಪಾಂಡ್ಯ ಹೆಸರು ತೆಗೆದುಕೊಳ್ಳದಿದ್ದಕ್ಕೆ ಕೆಲ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಗಂಭೀರ್ ಆಯ್ಕೆಯನ್ನು ಒಪ್ಪಿಕೊಂಡಿದ್ದಾರೆ.
ಗಂಭೀರ್ ಅವರು ನೀಡಿದ ಉತ್ತರಗಳು ಹೀಗಿವೆ... ಕ್ಲಚ್–ಸಚಿನ್ ತೆಂಡೂಲ್ಕರ್, ದೇಸಿ ಬಾಯ್– ವಿರಾಟ್ ಕೊಹ್ಲಿ, ಸ್ಪೀಡ್– ಜಸ್‌ಪ್ರೀತ್ ಬೂಮ್ರಾ, ಗೋಲ್ಡನ್ ಆರ್ಮ್– ನಿತಿಶ್ ರಾಣಾ, ಮೋಸ್ಟ್ ಸ್ಟೈಲಿಶ್– ಶುಭಮನ್ ಗಿಲ್, ಮಿಸ್ಟರ್ ಕನ್ಸಿಸ್ಟೆಂಟ್–ರಾಹುಲ್ ದ್ರಾವಿಡ್, ರನ್ ಮೆಶಿನ್– ವಿವಿಎಸ್ ಲಕ್ಷ್ಮಣ್, ಮೋಸ್ಟ್ ಫನ್ನಿ–ರಿಷಬ್ ಪಂತ್, ಡೆತ್ ಓವರ್ ಸ್ಪೆಶಲಿಸ್ಟ್– ಜಹೀರ್ ಖಾನ್
ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಕಳೆದ ವರ್ಷ ನೇಮಕಗೊಂಡಿದ್ದ ಗಂಭೀರ್ ಅವರು ಸೀಮಿತ ಓವರ್ ಪಂದ್ಯಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.
ಸೆಪ್ಟೆಂಬರ್ 9ರಿಂದ ‘ಏಷ್ಯಾ ಕಪ್’ ಪಂದ್ಯಗಳು ಆರಂಭವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.