ADVERTISEMENT

ದಿಢೀರ್ ತವರಿಗೆ ಮರಳಿದ ಕೋಚ್ ಗೌತಮ್ ಗಂಭೀರ್!

ಪಿಟಿಐ
Published 26 ನವೆಂಬರ್ 2024, 8:03 IST
Last Updated 26 ನವೆಂಬರ್ 2024, 8:03 IST
<div class="paragraphs"><p>ಗೌತಮ್ ಗಂಭೀರ್</p></div>

ಗೌತಮ್ ಗಂಭೀರ್

   

ಪರ್ತ್‌: ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಭಾರತ -ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಸೋಮವಾರ ಮುಕ್ತಾಯವಾಗಿದ್ದು, ಮಂಗಳವಾರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ದಿಢೀರ್ ಆಗಿ ತವರಿಗೆ ಮರಳಿದ್ದಾರೆ.

ವೈಯಕ್ತಿಕ ಕಾರಣದಿಂದ ಗಂಭೀರ್ ಭಾರತಕ್ಕೆ ಮರಳಿರುವುದಾಗಿ ತಿಳಿದುಬಂದಿದೆ. ಅಡಿಲೇಡ್‌ನಲ್ಲಿ ಡಿಸೆಂಬರ್‌ 6ರಂದು ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ADVERTISEMENT

‘ಇಂದು ಮುಂಜಾನೆ ತಮ್ಮ ಕುಟುಂಬದೊಂದಿಗೆ ಗಂಭೀರ್‌ ಭಾರತಕ್ಕೆ ಮರಳಿದ್ದಾರೆ. ಕೌಟುಂಬಿಕ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಇದು ಅನಿವಾರ್ಯವಾಗಿದೆ. ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮೊದಲು ಅವರು ಅಡಿಲೇಡ್‌ಗೆ ಹಿಂದಿರುಗುವ ಸಾಧ್ಯತೆಯಿದೆ’ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಭಾರತ ತಂಡ ಬುಧವಾರ ಕೆನ್‌ಬೆರಾಕ್ಕೆ ತೆರಳಲಿದ್ದು, ಅಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಅಂಟೋನಿ ಅಲ್ಬನೀಸ್‌ ಅವರು ಔತಣಕೂಟದ ಆತಿಥ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 30ರಂದ ಎರಡು ದಿನಗಳ ಪಿಂಕ್‌ ಬಾಲ್ ಅಭ್ಯಾಸ ಪಂದ್ಯ ನಡೆಯಲಿದೆ. ಎರಡನೇ ಟೆಸ್ಟ್ ಹಗಲು ರಾತ್ರಿ ಪಂದ್ಯವಾಗಿರುವ ಕಾರಣ ಈ ಸಿದ್ಧತಾ ಪಂದ್ಯ ಮಹತ್ವದ್ದಾಗಿದೆ.

ಪ್ರೈಮ್‌ ಮಿನಿಸ್ಟರ್ಸ್‌ ಇಲೆವೆನ್ ತಡವನ್ನು ಆಲ್‌ರೌಂಡರ್ ಜಾಕ್ ಎಡ್ವರ್ಡ್ಸ್ ಮುನ್ನಡೆಸಲಿದ್ದು, ತಂಡ ಬಹುತೇಕ ಯುವಮುಖಗಳನ್ನು ಒಳಗೊಂಡಿದೆ. ಸ್ಕಾಟ್‌ ಬೋಲ್ಯಾಂಡ್‌, ಮ್ಯಾಥ್ಯೂ ರೆನ್ಷಾ ಸೇರಿದ ಟೆಸ್ಟ್ ಆಡಿದ ಕೆಲವರಷ್ಟೇ ಆ ತಂಡದಲ್ಲಿದ್ದಾರೆ.

ಪಂದ್ಯದ ನಿಯಮಗಳನ್ನು ಎರಡು ತಂಡಗಳು ನಿರ್ಧರಸಲಿವೆ. ಎಲ್ಲ ಆಟಗಾರರಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಅವಕಾಶ ದೊರೆಯಲಿದೆ. ಇದು ಅಧಿಕೃತ ಪಂದ್ಯದ ಸ್ಥಾನಮಾನವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.