ADVERTISEMENT

ಐಸಿಸಿ ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಗಿಲ್ ಮುಂದುವರಿಕೆ

ಪಿಟಿಐ
Published 26 ಫೆಬ್ರುವರಿ 2025, 13:27 IST
Last Updated 26 ಫೆಬ್ರುವರಿ 2025, 13:27 IST
ಶುಭಮನ್ ಗಿಲ್ 
ಶುಭಮನ್ ಗಿಲ್    

ದುಬೈ: ಭಾರತ ತಂಡದ ಬ್ಯಾಟರ್ ಶುಭಮನ್ ಗಿಲ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಎ ಗುಂಪಿನ ಪಂದ್ಯಗಳಲ್ಲಿ ಅವರು ಬಾಂಗ್ಲಾ ಎದುರು ಅಜೇಯ 101 ಹಾಗೂ ಪಾಕಿಸ್ತಾನ ವಿರುದ್ಧ 46 ರನ್ ಗಳಿಸಿದ್ದರು. ಇದರೊಂದಿಗೆ ಅವರು 21 ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 817 ರೇಟಿಂಗ್ ಅಂಕಗಳಿವೆ.  ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಆಜಂ ಅವರಿಗಿಂತ 47 ಅಂಕಗಳನ್ನು ಹೆಚ್ಚು ಗಳಿಸಿದ್ದಾರೆ.

ಪಾಕ್ ಎದುರಿನ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದ ವಿರಾಟ್ ಕೊಹ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಈ ಹಾದಿಯಲ್ಲಿ ಅವರು ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿದ್ದಾರೆ. ಕೆ.ಎಲ್. ರಾಹುಲ್ ಎರಡು ಸ್ಥಾನಗಳ ಬಡ್ತಿ ಪಡೆದು 15ಕ್ಕೇರಿದ್ದಾರೆ. ಕಿವೀಸ್ ಬ್ಯಾಟರ್ ವಿಲ್ ಯಂಗ್ ಮತ್ತು ಟಾಮ್ ಲೇಥಮ್ ಅವರು ಕ್ರಮವಾಗಿ 14 ಹಾಗೂ 30ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾ ಎದುರು ಶತಕ ಬಾರಿಸಿದ ರಚಿನ್ ರವೀಂದ್ರ ಅವರು 18 ಸ್ಥಾನಗಳ ಬಡ್ತಿ ಪಡೆದು 24ಕ್ಕೆ ಜಿಗಿದಿದ್ದಾರೆ. ಗ್ಲೆನ್ ಫಿಲಿಪ್ಸ್‌ 12ನೇ ಸ್ಥಾನ ಪಡೆದಿದ್ದಾರೆ. 

ADVERTISEMENT

ಬೌಲಿಂಗ್‌ ವಿಭಾಗದಲ್ಲಿ ಕೇಶವ್ ಮಹಾರಾಜ್ ಮತ್ತು ಮ್ಯಾಟ್‌ ಹೆನ್ರಿ ಅವರು  ಅಗ್ರ ಐದರಲ್ಲಿ ಸ್ಥಾನಗಳಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯಡಂ ಜಂಪಾ ಅವರು 10ನೇ ಸ್ಥಾನಕ್ಕೇರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.