ADVERTISEMENT

ಪೊಲೀಸರ ಮೇಲಿನ ಹಲ್ಲೆ ವಿಡಿಯೊ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ ಹರ್ಭಜನ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 6:39 IST
Last Updated 27 ಮಾರ್ಚ್ 2020, 6:39 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಆದೇಶ ಹೊರಡಿಸಿದ್ದಾರೆ. ಆದರೆ, ಇದನ್ನು ಉಲ್ಲಂಘಿಸಿ ಕೆಲವರು ತಡೆಯಲು ಬಂದ ಪೊಲೀಸರ ಮೇಲೇಯೇ ಹಲ್ಲೆ ನಡೆಸಿದ ಕೆಲವು ಪ್ರಕರಣಗಳು ದೇಶದಾದ್ಯಂತ ವರದಿಯಾಗಿವೆ.

ಈ ರೀತಿಯ ವಿಡಿಯೊವೊಂದನ್ನು ತಮ್ಮ ಟ್ವಿಟರ್ ಪುಟದಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿರುವ ಕ್ರಿಕೆಟಿಗ ಹರ್ಭಜನ್‌ ಸಿಂಗ್‌, ನಮ್ಮ ಮನೋಭಾವಗಳು ಬದಲಾಗಬೇಕಿದೆ ಎಂದುಹೇಳಿದ್ದಾರೆ.

ವಿಡಿಯೊ ಜೊತೆಗೆ ಅವರು, ‘ಪೊಲೀಸರ ಬಗೆಗಿನ ನಮ್ಮ ಕೆಟ್ಟ ಮನೋಭಾವವನ್ನು ಬದಲಿಸಿಕೊಳ್ಳಬೇಕಾಗಿದೆ. ಅವರು ನಮ್ಮನ್ನು ಕಾಯಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂಬುದನ್ನು ಮರೆಯಬಾರದು. ಅವರಿಗೂ ಕುಟುಂಬಗಳಿವೆ. ಆದರೆ, ದೇಶಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲವಾಗಿದ್ದರೆ ನಾವು ಮನೆಯಲ್ಲಿ ಸುಮ್ಮನೆ ಇರಲು ಸಾಧ್ಯವಾಗುತ್ತಿರಲಿಲ್ಲ. ಉತ್ತಮ ಭವಿಷ್ಯಕ್ಕಾಗಿ ಆಲೋಚಿಸಿ. ದಯವಿಟ್ಟು ಸಂವೇದನಾಶೀಲರಾಗಿರಿ’ ಎಂದು ಕಿವಿಮಾತು ಹೇಳಿದ್ದಾರೆ.

ADVERTISEMENT

ಕೋವಿಡ್‌–19 ಭೀತಿಯಿಂದಾಗಿ ಘೋಷಿಸಲಾಗಿರುವ ಲಾಕ್‌ಡೌನ್‌ ಆದೇಶವು ಏಪ್ರಿಲ್‌ 14ರ ವರೆಗೆ ಜಾರಿಯಲ್ಲಿರಲಿದೆ. ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಸೊಂಕು ಪೀಡಿತರ ಸಂಖ್ಯೆ 724ಕ್ಕೆ ಏರಿಕೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.