ADVERTISEMENT

‘ಹರಭಜನ್ ಸಹ ಭಾವುಕರಾಗಿದ್ದರು...’ | ‘800’ ಸಿನಿಮಾ ಬಗ್ಗೆ ಮಾತನಾಡಿದ ಮುರಳೀಧರನ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 1:30 IST
Last Updated 2 ಡಿಸೆಂಬರ್ 2023, 1:30 IST
ಮುತ್ತಯ್ಯ ಮುರಳೀಧರನ್
ಮುತ್ತಯ್ಯ ಮುರಳೀಧರನ್    

ಬೆಂಗಳೂರು: ‘ತಮ್ಮ ಜೀವನಕಥೆ ಆಧರಿಸಿದ ‘800’ ಚಿತ್ರವನ್ನು ನೋಡಿದ ನಂತರ ಭಾರತದ ಬೌಲರ್‌ ಹರಭಜನ್ ಸಿಂಗ್ ಅವರು ಭಾವುಕರಾಗಿದ್ದರು. ಅವರೂ ನನ್ನಂತೆ ‘ಚಕ್‌’ (ಚೆಂಡನ್ನು ಎಸೆದ) ಮಾಡಿದ  ಆರೋಪಕ್ಕೆ ಒಳಗಾಗಿದ್ದರು. ಅವರೂ ಕಷ್ಟದ ದಿನಗಳನ್ನು ಎದುರಿಸಿದ್ದರು’ ಎಂದು ಶ್ರೀಲಂಕಾದ ಬೌಲರ್ ಮುತ್ತಯ್ಯ ಮುರಳೀಧರನ್ ಹೇಳಿದರು.

ಜಿಯೊ ಸಿನಿಮಾದಲ್ಲಿ ಶನಿವಾರ ಪ್ರಸಾರಗೊಳ್ಳಲಿರುವ ತಮ್ಮ ಚಿತ್ರಕ್ಕೆ ಪೂರ್ವಭಾವಿಯಾಗಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮುಂಬೈನಲ್ಲಿ ನಡೆದ ಪ್ರದರ್ಶನದಲ್ಲಿ ಹರಭಜನ್, ಸೆಹ್ವಾಗ್ ಮತ್ತಿತರ ಆಟಗಾರರನ್ನು ಆಹ್ವಾನಿಸಿದ್ದೆ. ಶ್ರೀಲಂಕಾದಲ್ಲೂ ಮೊದಲ ಪ್ರದರ್ಶನಕ್ಕೆ (ಅಕ್ಟೋಬರ್ 6) ನನ್ನ ಜೊತೆ ಅರ್ಜುನ ರಣತುಂಗ, ಸನತ್‌ ಜಯಸೂರ್ಯ ಸೇರಿದಂತೆ ಹಲವರು ಬಂದಿದ್ದರು’ ಎಂದರು.

ADVERTISEMENT

‘ನನ್ನ ಬೌಲಿಂಗ್‌ ಶೈಲಿ ಅಸಾಂಪ್ರದಾಯಿಕವಾದುದು. ಅದನ್ನೇ ಪರಿಪೂರ್ಣವಾಗಿ ಅನುಕರಿಸುವುದಕ್ಕಿಂತ ನಾನು ಬಾಲ್ಯದಲ್ಲಿ ಪಟ್ಟ ಬವಣೆಗಳು, ಕ್ರೀಡಾಂಗಣದಲ್ಲಿ ಮತ್ತು ಆಚೆ ಎದುರಿಸಿದ ಕಷ್ಟ, ಸವಾಲುಗಳನ್ನು ಬಿಂಬಿಸುವುದು ಮುಖ್ಯ ಎಂದು ನಟ ಮಧುರ್‌ಗೆ ಹೇಳಿದ್ದೆ’ ಎಂದು ಟೆಸ್ಟ್‌ಗಳಲ್ಲಿ 800 ವಿಕೆಟ್‌ ಪಡೆದಿರುವ ಆಫ್‌ ಸ್ಪಿನ್‌ ದಿಗ್ಗಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.